ಕೃಷ್ಣ ಜನ್ಮಸ್ಥಾನದಿಂದ ಮಸೀದಿ ತೆರವುಗೊಳಿಸುವಂತೆ ಮಥುರಾ ನ್ಯಾಯಾಲಯದಲ್ಲಿ ಮೊಕದ್ದಮೆ

Prasthutha|

- Advertisement -

ಹೊಸದಿಲ್ಲಿ: ಮಥುರಾದ ಕೃಷ್ಣ ಜನ್ಮ ಭೂಮಿ ಪ್ರದೇಶದಲ್ಲಿರುವ ಮಸೀದಿಯನ್ನು ತೆರವುಗೊಳಿಸಬೇಕೆಂದು ಕೋರಿ ಮಥುರಾದ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಮೊಕದ್ದಮೆಯೊಂದನ್ನು ಸಲ್ಲಿಸಲಾಗಿದೆ.

1960ರಲ್ಲಿ ಕೃಷ್ಣ ಜನ್ಮಭೂಮಿ ಆವರಣವನ್ನು ಪ್ರವೇಶಿಸಿ ಪ್ರಾರ್ಥನೆ ನಡೆಸಲು ಅನುಮತಿ ನೀಡಿರುವ ಕೋರ್ಟ್ ಆದೇಶವನ್ನು ರದ್ದುಗೊಳಿಸಬೇಕೆಂದು ಅರ್ಜಿದಾರ ಉತ್ತರ ಪ್ರದೇಶದ ಲಕ್ನೊ ನಿವಾಸಿ ರಂಜನ್ ಅಗ್ನಿ ಹೋತ್ರಿ ದೂರಿನಲ್ಲಿ ಹೇಳಿದ್ದಾರೆ.

- Advertisement -

ಮೊಕದ್ದಮೆಯಲ್ಲಿ ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಶಾಹಿ ಈದ್ಗಾ ಮ್ಯಾನೇಜ್ ಮೆಂಟ್ ಸಮಿತಿಯನ್ನು ಪ್ರತಿವಾದಿಗಳಾಗಿ ಮಾಡಲಾಗಿದೆ.

ದೇವಸ್ಥಾನದ ಆವರಣದಲ್ಲಿರುವ 13.37 ಎಕರೆ ಜಮೀನಿನ ಮರುಒತ್ತುವರಿ ಮಾಡುವಂತೆ ದೂರಿನಲ್ಲಿ ಹೇಳಲಾಗಿದೆ. ಟ್ರಸ್ಟ್ ಕೆಲವು ಮುಸ್ಲಿಮರ ನೆರವಿನೊಂದಿಗೆ  ಶ್ರೀಕೃಷ್ಣ ಜನ್ಮಸ್ಥಾನ ಟ್ರಸ್ಟ್ ಮತ್ತು ದೇವತೆಯ ಭೂಮಿಯನ್ನು ಆಕ್ರಮಿಸಿಕೊಂಡು ಮಸೀದಿ ನಿರ್ಮಿಸಿದೆ ಎಂಬುದಾಗಿ ದೂರಿನಲ್ಲಿ ಹೇಳಲಾಗಿದೆ



Join Whatsapp