ತುರ್ತುಪರಿಸ್ಥಿತಿ ಹೋರಾಟ ಕುರಿತ ಹೇಳಿಕೆ| ಸುಳ್ಳು ಹೇಳಿ ಸಿಕ್ಕಿ ಬಿದ್ದ ಸಚಿವ ಆರ್.ಅಶೋಕ್

Prasthutha|

ಬೆಂಗಳೂರು: 1975ರ ತುರ್ತುಪರಿಸ್ಥಿತಿ ವೇಳೆ ಹೋರಾಟ ನಡೆಸಿ ಜೈಲಿಗೆ ಹೋಗಿದ್ದೇನೆಂದು ನಿನ್ನೆ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ವತಿಯಿಂದ ಕರಾಳ ದಿನ ಆಚರಣೆ ವೇಳೆ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದು, ಇದೀಗ ಸಚಿವರು ನೀಡಿದ ಹೇಳಿಕೆ ಶುದ್ಧ ಸುಳ್ಳೆಂದು ಸಾಬೀತಾಗಿದೆ.

- Advertisement -

1976 ರಲ್ಲಿ ಕಾಲೇಜು ಸೇರಿದ್ದ ಸಚಿವ ಆರ್.ಅಶೋಕ್, 1975ರಲ್ಲಿ ಅದೇ ಕಾಲೇಜಿನಲ್ಲಿ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿ ಜೈಲಿಗೆ ಹೋಗಿದ್ದೇನೆಂದು ಹೇಳಿಕೆ ನೀಡಿದ್ದಾರೆ.

“1975ರಲ್ಲಿ ತುರ್ತುಪರಿಸ್ಥಿತಿ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿದ್ದೆ. ಆಗ ನಾನು ವಿವಿಪುರಂ ಕಾಲೇಜಿನಲ್ಲಿ ಓದುತ್ತಿದೆ. ಒಂದು ತಿಂಗಳು ಜೈಲಿನಲ್ಲಿದ್ದೆ ಎಂದು ಕಂದಾಯ ಸಚಿವ ಆರ್.ಅಶೋಕ್ ನಿನ್ನೆ ಫ್ರೀಡಂ ಪಾರ್ಕ್ ನಲ್ಲಿ ಹೇಳಿಕೆ ನೀಡಿದ್ದರು.

- Advertisement -

ಆದರೆ ಅಶೋಕ್ ಅವರು 1974ರಲ್ಲಿ HMT Higher secondary school, 1976ರಲ್ಲಿ ವಿವಿ ಪುರಂ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು ಎಂದು ವಿಕಿಪೀಡಿಯ ಹೇಳುತ್ತಿದೆ.

“ಈ ಬಿಜೆಪಿಯವರೇ ಹೀಗೆ. ಬರೀ ಬುರುಡೆ ಬಿಡುತ್ತಾರೆ. ರೈಲ್ವೆ ಸ್ಟೇಷನ್ ಇಲ್ಲದ ಸ್ಟೇಷನ್ ನಲ್ಲಿ ಚಹಾ ಮಾರಿದ್ದೆ, ಬಾಂಗ್ಲಾ ಹೋರಾಟದಲ್ಲಿ ಭಾಗಿಯಾಗಿದ್ದೆ ಎಂದೆಲ್ಲಾ ಪುಂಗಿ ಊದುವ ನಾಯಕರಿರುವ ಪಕ್ಷದಲ್ಲಿ ಅಶೋಕ್ ಈ ರೀತಿ ಹೇಳಿದ್ದು ಏನೇನೂ ಅಲ್ಲ” ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.



Join Whatsapp