ಕೋವಿಡ್‌ ನಿಯಮ ಉಲ್ಲಂಘಿಸಿ ಸಿಬ್ಬಂದಿಗೆ ಕಿಸ್‌ ಕೊಟ್ಟ ಬ್ರಿಟನ್‌ ಆರೋಗ್ಯ ಸಚಿವ ಮ್ಯಾಟ್‌ ರಾಜೀನಾಮೆ

Prasthutha|

ಲಂಡನ್‌ : ಜಗತ್ತಿನ ಬಹುತೇಕ ಎಲ್ಲಾ ದೇಶಗಳಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಕಠಿಣ ನಿಯಮಗಳು ಜಾರಿಯಲ್ಲಿವೆ. ಕೋವಿಡ್‌ ನಿಯಮಗಳನ್ನು ಪಾಲಿಸಬೇಕೆಂದು ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಆದರೆ, ಇಂತಹ ನಿಯಮಗಳನ್ನು ಜಾರಿಗೊಳಿಸುವ ಸ್ಥಾನದಲ್ಲಿದ್ದು, ಸ್ವಯಂ ತಾನೇ ನಿಯಮ ಮೀರಿದ್ದಕ್ಕಾಗಿ ಬ್ರಿಟನ್‌ ನ ಆರೋಗ್ಯ ಸಚಿವರ ತಲೆದಂಡ ಪಡೆಯಲಾಗಿದೆ. ಕೋವಿಡ್‌ ನಿಯಮ ಉಲ್ಲಂಘಿಸಿ ತನ್ನ ಸಿಬ್ಬಂದಿಗೆ ಮುತ್ತು ಕೊಟ್ಟಿದ್ದಕ್ಕೆ ಬ್ರಿಟನ್‌ ಆರೋಗ್ಯ ಸಚಿವ ಮ್ಯಾಟ್‌ ಹ್ಯಾನ್‌ ಕಾಕ್‌ ಅವರ ರಾಜೀನಾಮೆ ಪಡೆಯಲಾಗಿದೆ.

- Advertisement -

ತಮ್ಮ ಕಚೇರಿಯಲ್ಲಿ ವಿವಾಹಿತ ಆಪ್ತ ಸಿಬ್ಬಂದಿಯೊಬ್ಬರಿಗೆ ಮ್ಯಾಟ್‌ ಮುತ್ತು ನೀಡಿದ್ದರು. ಲಾಕ್‌ ಡೌನ್‌ ನಿರ್ಬಂಧಗಳನ್ನು ಮೀರಿ ಮುತ್ತು ನೀಡಿದ್ದಕ್ಕೆ ಅಲ್ಲಿನ ಪ್ರತಿಪಕ್ಷಗಳು ಮ್ಯಾಟ್‌ ಹ್ಯಾನ್‌ ಕಾಕ್‌ ವಿರುದ್ಧ ವಾಗ್ದಾಳಿ ನಡೆಸಿದ್ದವು.

ಸಚಿವರು ಸಿಬ್ಬಂದಿಗೆ ಮುತ್ತು ನೀಡಿದ್ದ ಫೋಟೊ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಕೃತ್ಯವನ್ನು ಒಪ್ಪಿಕೊಂಡು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.



Join Whatsapp