ರಾಜ್ಯ ಹಜ್ ಸಮಿತಿ ಅಧ್ಯಕ್ಷರಾಗಿ ಬಿಜೆಪಿಯ ರವೂಫುದ್ದೀನ್ ಕಚೇರಿವಾಲೆ ಆಯ್ಕೆ

Prasthutha|

ಬೆಂಗಳೂರು: ರಾಜ್ಯ ಹಜ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಸಕ್ರಿಯ ಕಾರ್ಯಕರ್ತ ಬೀದರ್ ನ ರವೂಫುದ್ದೀನ್ ಕಚೇರಿವಾಲೆ ಆಯ್ಕೆಯಾಗಿದ್ದಾರೆ.

- Advertisement -


ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರು 2 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಕಚೇರಿವಾಲೆ ಅವರ ಪರವಾಗಿ 7 ಮತಗಳು ಬಿದ್ದಿದ್ದು, ಎರಡು ಮತಗಳು ಅಮಾನ್ಯಗೊಂಡಿದ್ದವು. ಫಾರೂಕ್ ಅವರಿಗೆ 5 ಮತಗಳು ಸಿಕ್ಕಿವೆ. ಒಟ್ಟು 14 ಮಂದಿ ಮತದಾರರಿದ್ದರು.


ರವೂಫುದ್ದೀನ್ ಅವರ ಅಧಿಕಾರಾವಧಿ ಒಂದೂವರೆ ವರ್ಷ. ಹಜ್ ಸಮಿತಿಗೆ ಮೂರು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಕಳೆದ ಅಧ್ಯಕ್ಷರ ಅವಧಿ ಮುಕ್ತಾಯಗೊಂಡು ಒಂದೂವರೆ ವರ್ಷವಾದರೂ ಚುನಾವಣೆ ನಡೆದಿರಲಿಲ್ಲ.ಈ ಬಗ್ಗೆ ಕೆಲವು ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಆದೇಶದಂತೆ ಗುರುವಾರ ವಿಕಾಸಸೌಧದಲ್ಲಿ ಮತದಾನ ನಡೆಯಿತು.



Join Whatsapp