ತಿರುವನಂತಪುರಂ: ಕೇರಳ ಸರ್ಕಾರ ಆರಾಧನಾಲಯಗಳನ್ನು ತೆರೆಯಲು ನಿರ್ಧರಿಸಿದ್ದು, ಟೆಸ್ಟ್ ಪಾಸಿಟಿವಿಟಿ ಪ್ರಮಾಣ ಶೇಕಡಾ 16 ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಆರಾಧನಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಒಂದೇ ಸಮಯದಲ್ಲಿ ಗರಿಷ್ಠ 15 ಜನರು ಮಾತ್ರ ಪ್ರಾರ್ಥನೆಯಲ್ಲಿ ಭಾಗವಹಿಸಬಹುದು. ಸಾಮಾನ್ಯ ನಿರ್ಬಂಧಗಳು ಪ್ರಸ್ತುತ ರೀತಿಯಲ್ಲಿ ಇನ್ನೂ ಒಂದು ವಾರ ಮುಂದುವರಿಯಲಿದ್ದು, ಟೆಸ್ಟ್ ಪಾಸಿಟಿವಿಟಿ ಪ್ರಮಾಣ ಹೆಚ್ಚು ಇರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ನಿಯಂತ್ರಣ ಕೈಗೊಳ್ಳಲಾಗುವುದು. ಟೆಸ್ಟ್ ಪಾಸಿಟಿವಿಟಿ ಆಧಾರದ ಮೇಲೆ ನಿಯಂತ್ರಣಕ್ಕಾಗಿ ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. ಟೆಸ್ಟ್ ಪಾಸಿಟಿವಿಟಿ ಪ್ರಮಾಣ ಶೂನ್ಯದಿಂದ 8ಶೇಕಡಾ ಇದ್ದಲ್ಲಿ ಎ ವರ್ಗ, 8ರಿಂದ 16 ಶೇಕಡಾ ಬಿ ವರ್ಗ, 16 ರಿಂದ 24 ಶೆಕಡಾ ಸಿ ವರ್ಗ ಮತ್ತು 24 ಶೇಕಡಾ ಗಿಂತ ಹೆಚ್ಚು ಡಿ ವರ್ಗವನ್ನು ವಲಯಗಳಾಗಿ ವರ್ಗೀಕರಿಸಲಾಗಿದೆ.