2020ರಲ್ಲಿ ಸ್ವಿಝ್‌ ಬ್ಯಾಂಕ್‌ ಗಳಲ್ಲಿ 20,700 ಕೋಟಿ ರೂ. ಭಾರತೀಯರ ಹಣ ಜಮೆ : 13 ವರ್ಷಗಳಲ್ಲೇ ಗರಿಷ್ಠ

Prasthutha|

ನವದೆಹಲಿ : ಸ್ವಿಝ್‌ ಬ್ಯಾಂಕ್‌ ಗಳಲ್ಲಿರುವ ಕಪ್ಪು ಹಣ ತಂದು ಭಾರತದಲ್ಲಿ ಉಚಿತವಾಗಿ ಹಂಚುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಅಧಿಕಾರಕ್ಕೆ ಬಂದು ಏಳು ವರ್ಷ ಕಳೆದರೂ ಕಪ್ಪು ಹಣ ಮಾತ್ರ ಬರುವುದು ಕಾಣುತ್ತಿಲ್ಲ. ಆದರೆ, ವರ್ಷದಿಂದ ವರ್ಷಕ್ಕೆ ಸ್ವಿಝ್‌ ಬ್ಯಾಂಕ್‌ ಗಳಲ್ಲಿ ಭಾರತೀಯರ ಕಪ್ಪು ಹಣ ಹೆಚ್ಚುತ್ತಲೇ ಇದೆ.

- Advertisement -

ವರದಿಯೊಂದರ ಪ್ರಕಾರ, ಕಳೆದ ವರ್ಷ ಭಾರತ ಮೂಲದ ಶಾಖೆಗಳು ಸೇರಿದಂತೆ ಸ್ವಿಝ್‌ ಬ್ಯಾಂಕ್‌ ಗಳು ಮತ್ತು ಅಲ್ಲಿನ ಹಣಕಾಸು ಸಂಸ್ಥೆಗಳಲ್ಲಿ ಭಾರತೀಯರ ಸುಮಾರು 20,700 ಕೋಟಿ ರೂ. ಜಮೆಯಾಗಿದೆ ಎಂದು ವರದಿಗಳು ತಿಳಿಸಿವೆ. ಸ್ವಿಝರ್‌ ಲ್ಯಾಂಡ್‌ ನ ಕೇಂದ್ರೀಯ ಬ್ಯಾಂಕ್‌ ನ ಅಂಕಿ ಅಂಶಗಳಿಂದ ಇದು ತಿಳಿದುಬಂದಿದೆ.

ಸ್ವಿಝ್‌ ಬ್ಯಾಂಕ್‌ ಗಳಲ್ಲಿ ಭಾರತೀಯ ಖಾತೆದಾರರ ಹಣ ಜಮಾವಣೆ ಎರಡು ವರ್ಷ ಇಳಿಕೆಯಾಗಿದ್ದರೂ, ಕಳೆದ ವರ್ಷ ಮತ್ತೆ ದಿಢೀರ್‌ ಏರಿಕೆಯಾಗಿದೆ. 2019ರಲ್ಲಿ ಸ್ವಿಝ್‌ ಬ್ಯಾಂಕ್‌ ಗಳಲ್ಲಿ ಭಾರತೀಯರ 6,625 ಕೋಟಿ ರೂ. ಜಮಾವಣೆಗೊಂಡಿತ್ತು. ಆದರೆ, 2020ರ ವರ್ಷದಲ್ಲಿ 13 ವರ್ಷಗಳಲ್ಲೇ ಅತ್ಯಧಿಕ ಮೊತ್ತ ಸ್ವಿಝ್‌ ಬ್ಯಾಂಕ್‌ ಗಳಲ್ಲಿ ಜಮಾವಣೆಗೊಂಡಿದೆ.



Join Whatsapp