ಮುಂಬೈ : ಸತತ ಎಂಟು ದಿನಗಳ ಕಾಲ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದು, ಗುರುವಾರ ಒಂದು ಡಾಲರ್ ಗೆ 74ರ ಗಡಿ ತಲುಪಿದೆ. 76 ಪೈಸೆಗಳ ಕುಸಿತದ ಬಳಿಕ ಪ್ರತಿ ಡಾಲರ್ ಗೆ 74.08 ರೂ. ಮೌಲ್ಯ ದಾಖಲಾಗಿದೆ. ಅಮೆರಿಕನ್ ಕರೆನ್ಸಿ ವಿರುದ್ಧ 73.65 ರೂ. ಮೌಲ್ಯದ ಮೂಲಕ ದಿನದ ವಹಿವಾಟು ಆರಂಭಿಸಿದ ರೂಪಾಯಿ, ದಿನದ ಅಂತ್ಯಕ್ಕೆ 74.08ಕ್ಕೆ ತಲುಪಿತ್ತು.
ಬುಧವಾರ ರೂಪಾಯಿ 73.32ಕ್ಕೆ ದಿನದ ವಹಿವಾಟು ಕೊನೆಗೊಳಿಸಿತ್ತು. ಕಳೆದ ಎಂಟು ಸತತ ಟ್ರೇಡಿಂಗ್ ದಿನಗಳಲ್ಲಿ ರೂಪಾಯಿ ಡಾಲರ್ ಎದುರು 128 ಪೈಸೆ ಕಳೆದುಕೊಂಡಿದೆ.
ಒಂದೆಡೆ ಪೆಟ್ರೋಲ್, ಡೀಸೆಲೆ ಬೆಲೆ ಏರಿಕೆಯಿಂದ ಬೆಲೆ ಏರಿಕೆ ಕಂಡು ಜನ ತತ್ತರಿಸಿದ್ದರೆ, ಇನ್ನೊಂದೆಡೆ ರೂಪಾಯಿ ಮೌಲ್ಯವೂ ದಿನದಿಂದ ದಿನಕ್ಕೆ ಕುಸಿದತ್ತ ಸಾಗಿದೆ. ಆದರೆ, ಈ ಬಗ್ಗೆ ಪ್ರತಿಪಕ್ಷಗಳೂ ಮೌನವಾಗಿರುವುದು ವಿಪರ್ಯಾಸ.