ದುಬೈಯಲ್ಲಿ ವಿದೇಶಿ ಪ್ರಜೆಗಳಿಗೆ ವಿವಿಧ ಸರ್ಕಾರಿ ಉದ್ಯೋಗಾವಕಾಶಗಳು : 6 ಲಕ್ಷ ರೂಪಾಯಿಗಳ ವರೆಗೆ ಸಂಬಳ

Prasthutha|

ದುಬೈ ಸರ್ಕಾರವು ವಲಸಿಗರಿಗೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರಜೆಗಳಿಗೆ ಹಲವಾರು ಉದ್ಯೋಗಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದುಬೈ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವೂ ವಲಸಿಗರಿಗೆ ಇದೆ.

- Advertisement -

ಖಲೀಜ್ ಟೈಮ್ಸ್ ಪ್ರಕಾರ, ದುಬೈ ಆರೋಗ್ಯ ಇಲಾಖೆ, ದುಬೈ ಸಂಸ್ಕೃತಿ, ವೃತ್ತಿಪರ ಸಂವಹನ ನಿಗಮ, ದುಬೈ ನಾಗರಿಕ ರಕ್ಷಣೆ, ದುಬೈ ಹಣಕಾಸು ಲೆಕ್ಕಪರಿಶೋಧನಾ ಪ್ರಾಧಿಕಾರ, ದುಬೈ ರಸ್ತೆ ಸಾರಿಗೆ ಪ್ರಾಧಿಕಾರ, ದುಬೈ ವಿಮಾನಯಾನ ಇಲಾಖೆ ಮತ್ತು ದುಬೈ ಸಮುದಾಯ ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿವೆ.

ವಿದೇಶಿ ಪ್ರಜೆಗಳಿಗೂ ಕೂಡಾ ಅರ್ಜಿ ಸಲ್ಲಿಸಬಹುದಾದ ಅನೇಕ ಹುದ್ದೆಗಳಿವೆ. ಸಂಬಳವು 30,000 ದಿರ್ಹಾಮ್ ಗಳವರೆಗೆ (ಸುಮಾರು ಆರು ಲಕ್ಷ ಭಾರತೀಯ ರೂಪಾಯಿಗಳು) ಇದೆ. ವಲಸಿಗರು ಅರ್ಜಿ ಸಲ್ಲಿಸಬಹುದಾದ ಉದ್ಯೋಗಗಳ ವಿವರಗಳು ಈ ಕೆಳಗಿನಂತಿದೆ.

- Advertisement -


ಎಲ್ಲಾ ರಾಷ್ಟ್ರೀಯತೆಯ ಪ್ರಜೆಗಳು ಅರ್ಜಿ ಸಲ್ಲಿಸಬಹುದಾದ ಉದ್ಯೋಗಗಳು, ಇಲಾಖೆಗಳು ಮತ್ತು ಅರ್ಹತೆಗಳು


ಆಡಿಟರ್ (ಲೆಕ್ಕ ಪರಿಶೋಧನೆ) ಹಣಕಾಸು ಲೆಕ್ಕಪರಿಶೋಧನಾ ಪ್ರಾಧಿಕಾರ – ಎಲ್ಲಾ ರೀತಿಯ ಲೆಕ್ಕಪರಿಶೋಧನಾ ವಿಷಯಗಳನ್ನು ನಿರ್ವಹಿಸುವ ಸಾಮರ್ಥ್ಯವಿರಬೇಕು. ಅಕೌಂಟ್ಸ್ ಅಥವಾ ಹಣಕಾಸು ಪದವಿ ಪಡೆದಿರಬೇಕು.


ವೈದ್ಯಕೀಯ ಲ್ಯಾಬ್ ಟೆಕ್ನಿಶಿಯನ್ : ದುಬೈ ಆರೋಗ್ಯ ಇಲಾಖೆ –  B.Sc ಪದವಿ ಮತ್ತು ಮೂರು ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವವಿರಬೇಕು. ಸಂಬಳ – ಗರಿಷ್ಠ 10,000 AED

ಸಹಾಯಕ ಮೆಡಿಕಲ್ ಫಿಶಿಸಿಯನ್ :  ದುಬೈ ಆಸ್ಪತ್ರೆ, ದುಬೈ ಆರೋಗ್ಯ ವಿಭಾಗ – ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ.


ಮಾನವ ಸಂಪನ್ಮೂಲ : ದುಬೈ ರಸ್ತೆ ಸಾರಿಗೆ ಇಲಾಖೆ

ಸೀನಿಯರ್ ರಿಜಿಸ್ಟ್ರಾರ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು : ದುಬೈ ಆರೋಗ್ಯ ಪ್ರಾಧಿಕಾರ – ವೈದ್ಯಕೀಯ ವಿಭಾಗದಿಂದ ಪದವಿ, ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜಿನ ಪ್ರಮಾಣಪತ್ರ.

ಹಿರಿಯ ತಜ್ಞ ಅಧಿಕಾರಿ : ದುಬೈ ಆರೋಗ್ಯ ಇಲಾಖೆ –  ಆರೋಗ್ಯ ನೀತಿ, ಆರೋಗ್ಯ ರಕ್ಷಣಾ ಆಡಳಿತ, ಸಾರ್ವಜನಿಕ ಆರೋಗ್ಯ, ಆರೋಗ್ಯ ವಿಜ್ಞಾನಗಳು ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಎಂಟು ವರ್ಷಗಳ ಅನುಭವ ಹೊಂದಿರುವ ಸ್ನಾತಕೋತ್ತರ ಪದವಿ.

ಸೈಕಾಲಜಿ ಪ್ರಾಕ್ಟೀಷನರ್ : ದುಬೈ ಡಯಾಬಿಟಿಸ್ ಸೆಂಟರ್ – ದುಬೈ ಆರೋಗ್ಯ ಇಲಾಖೆ – ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (MSc, MA, MPhil) – 10,000 AED ರಿಂದ 20,000 ದಿರ್ಹಮ್ ವರೆಗೆ ಸಂಬಳ

ಕುಟುಂಬ ಔಷಧದ ತಜ್ಞ ರಿಜಿಸ್ಟ್ರಾರ್ : ದುಬೈ ಆರೋಗ್ಯ ಪ್ರಾಧಿಕಾರ –   ಮಾನ್ಯತೆ ಪಡೆದ ವೈದ್ಯಕೀಯ ಶಾಲೆಯಿಂದ ಪದವಿ ಅಥವಾ ತತ್ಸಮಾನ.

ಸೀನಿಯರ್ ಟೆಕ್ನಿಶಿಯನ್ ನೆಟ್ವರ್ಕ್ ಮತ್ತು ಸೆಕ್ಯುರಿಟಿ :  ಸ್ಮಾರ್ಟ್ ದುಬೈ ವಿಭಾಗ – ಕಂಪ್ಯೂಟರ್ ಸಯನ್ಸ್ ನಲ್ಲಿ ಪದವಿ, CISSP ಪ್ರಮಾಣಪತ್ರ ಅಥವಾ ತತ್ಸಮಾನ

ರೇಡಿಯೋಗ್ರಾಫರ್ :  ದುಬೈ ಆರೋಗ್ಯ ವಿಭಾಗ – ರೇಡಿಯೋಗ್ರಫಿಯಲ್ಲಿ ಪದವಿ ಅಥವಾ ರೇಡಿಯೋಗ್ರಫಿಯಲ್ಲಿ ಉನ್ನತ ಡಿಪ್ಲೊಮಾ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ.

ಸ್ಟಾಫ್ ನರ್ಸ್: ಅಲ್ ಮಂಝರ್ ಆರೋಗ್ಯ ಕೇಂದ್ರ, ದುಬೈ ಆರೋಗ್ಯ ಇಲಾಖೆ –  ಬಿಎಸ್ಸಿ ಅಥವಾ ನರ್ಸಿಂಗ್ ಮತ್ತು ಡಿಎಚ್ಎ ಪರವಾನಗಿಯಲ್ಲಿ ತತ್ಸಮಾನ ಅರ್ಹತೆ ಮತ್ತು ಎರಡು ವರ್ಷಗಳ ಅನುಭವ ಇರಬೇಕು.

ಸೀನಿಯರ್ ಟೆಕ್ನಿಶಿಯನ್ : ದುಬೈ ನಾಗರಿಕ ವಿಮಾನಯಾನ ಇಲಾಖೆ – ವೈಮಾನಿಕ ವಾಹನ ವ್ಯವಸ್ಥೆಗಳು,  ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 7 ವರ್ಷಗಳ ಅನುಭವ ಇರಬೇಕು. ಇದೇ ಇಲಾಖೆಯಲ್ಲಿ ಟೆಲಿಕಾಂ ಎಂಜಿನಿಯರ್ ಗೆ ಕೂಡಾ ಉದ್ಯೋಗಾವಕಾಶಗಳಿವೆ.

ಮ್ಯಾನೇಜರ್ / ಸೂಪರ್ ವೈಸರ್ ಹುದ್ದೆ : 3 ವರ್ಷಗಳ ಅನುಭವ ಇರಬೇಕು ಮತ್ತು ಅರೇಬಿಕ್ ಹಾಗೂ ಇಂಗ್ಲಿಷ್ ಮಾತನಾಡಲು ಸಮರ್ಥರಾಗಿರಬೇಕು.

ಸುದ್ದಿ ಮೂಲ : ಖಲೀಜ್ ಟೈಮ್ಸ್

Join Whatsapp