ಆನ್‌ಲೈನ್ ಶಿಕ್ಷಣಕ್ಕೆ ಮಕ್ಕಳಿಗೆ ನೆರವಾಗಲು ‘ಮೊಬೈಲ್ ಫೋನ್ ಚಾಲೆಂಜ್’ ಎಂಬ ಹೊಸ ಯೋಜನೆ ರೂಪಿಸಿದ ಮಂಜೇಶ್ವರ ಶಾಸಕ AKM ಅಶ್ರಫ್

Prasthutha|

ಮಂಜೇಶ್ವರ: ಆನ್‌ಲೈನ್ ಅಧ್ಯಯನಕ್ಕೆ ಸೌಲಭ್ಯಗಳ ಕೊರತೆಯಿರುವ ಮಂಜೇಶ್ವರ ಕ್ಷೇತ್ರದ ಬಡ ವಿದ್ಯಾರ್ಥಿಗಳಿಗೆ ಶಾಸಕ ಎಕೆಎಂ ಅಶ್ರಫ್ ಮೊಬೈಲ್ ಫೋನ್ ಚಾಲೆಂಜ್ ಎಂಬ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

- Advertisement -

ಮಂಜೇಶ್ವರ ಕ್ಷೇತ್ರದ ಸುಮಾರು 500ರಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್ ನಲ್ಲಿ ಶಿಕ್ಷಣ ಪಡೆಯುವ ಸೌಲಭ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ತಿಳಿಸಿರುವುದಾಗಿ ಶಾಸಕರು ಹೇಳಿದ್ದಾರೆ. ಉಪ್ಪಳದಲ್ಲಿ ನಡೆದ ಬ್ಲಾಕ್ ಪಂಚಾಯಿತಿ ಅಧ್ಯಕ್ಷರು,  ಮಂಜೇಶ್ವರ ಕ್ಷೇತ್ರದ ಎಂಟು ಪಂಚಾಯಿತಿ ಅಧ್ಯಕ್ಷರು, ಜಿಲ್ಲಾ ಪಂಚಾಯ್ತಿ ಸದಸ್ಯರು, ಡಿಇಒ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮೊಬೈಲ್ ಫೋನ್ ಚಾಲೆಂಜ್ ಎಂಬ ಪ್ರಯೋಗವನ್ನು ಮುಂದಿಟ್ಟಿದ್ದಾರೆ.

ಪಂಚಾಯತ್ ಅಧ್ಯಕ್ಷರು ಮುಂದೆ ಬಂದು ತಮ್ಮ ಪಂಚಾಯಿತಿಗಳಲ್ಲಿ ಮೊಬೈಲ್ ಇಲ್ಲದೆ ಶಿಕ್ಷಣ ವಂಚಿತ ಮಕ್ಕಳಿಗೆ ರಾಜಕಾರಣಿಗಳು, ಶೈಕ್ಷಣಿಕ ಕಾರ್ಯಕರ್ತರ, ದಾನಿಗಳ ಸಹಾಯದಿಂದ ಮೊಬೈಲ್ ಫೋನ್ ಗಳನ್ನು ಒದಗಿಸಿಕೊಡಬೇಕು ಎಂಬ ಚಾಲೆಂಜನ್ನು ನೀಡಿದ್ದಾರೆ.

- Advertisement -

ಈ ನಿಟ್ಟಿನಲ್ಲಿ ತನ್ನ ಕ್ಷೇತ್ರದ ಎಲ್ಲಾ ಎಂಟು ಪಂಚಾಯಿತಿಗಳ ಫೋನ್ ಚಾಲೆಂಜ್ ಗೆ ತಮ್ಮ ಗೌರವಧನ ನೀಡಿ ಸಹಾಯ ಮಾಡುವುದಾಗಿ ಶಾಸಕರು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ವಿದ್ಯುತ್ ಇಲ್ಲದೆ ವಿಧ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಿರಲು ವಿದ್ಯುತ್ ಇಲ್ಲದ 10 ಮನೆಗಳಿಗೆ ತ್ವರಿತ ವಿದ್ಯುತ್ ಸಂಪರ್ಕಗಳನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಮಾಜಿ ಶಾಸಕ ಎಂಸಿ ಖಮರುದ್ದೀನ್ ಅವರು ನೀಡಿದ್ದ ಎಲ್ಲಾ 149 ದೂರದರ್ಶನಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ ವರದಿ ಮಾಡಲು ಪಂಚಾಯಿತಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಈ ವೇಳೆ ಶಾಸಕರು ಹೇಳಿದರು.



Join Whatsapp