ಶಿವಮೊಗ್ಗ: ಜಮೀನಿನಲ್ಲಿ ಬೋರ್ ವೇಲ್ ರಿಪೇರಿ ಮಾಡಲು ಹೋಗಿ ವಿದ್ಯುತ್ ಶಾಕ್ ನಿಂದ ಇಬ್ಬರು ಯುವಕರ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ. ಹಾರೋಗೊಪ್ಪ ಗ್ರಾಮದ ಇಬ್ಬರು ಯುವಕರು ತಮ್ಮ ಜಮೀನಿನಲ್ಲಿಯೇ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾರೆ.
ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಬಿ ಕ್ಯಾಂಪ್ ನ ನಿವಾಸಿಗಳಾದ ಶಶಿಕುಮಾರ್ ನಾಯ್ಕ್ (32) ಶೇಖರ್ ನಾಯ್ಕ್ (36) ಮೃತ ಯುವಕರು.
ತಮ್ಮ ಜಮೀನಿನಲ್ಲಿ ಬೋರ್ ವೆಲ್ ರಿಪೇರಿ ಮಾಡಲು ಹೋಗಿ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ