ಕೇರಳ | ಶವಾಗಾರದಲ್ಲಿ ಇರಿಸಲಾಗಿದ್ದ ಮೃತದೇಹ ಇಲಿ ಕಚ್ಚಿ ತಿಂದ ಸ್ಥಿತಿಯಲ್ಲಿ ಪತ್ತೆ!

Prasthutha|

ಪಾಲಕ್ಕಾಡ್ : ಕೇರಳದ ಪಟ್ಟಾಂಬಿ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಶವ ಇಲಿ ಕಚ್ಚಿ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ.

- Advertisement -

ನಿನ್ನೆ ಮೃತಪಟ್ಟು ಶವಾಗಾರದಲ್ಲಿ ಇರಿಸಲಾಗಿದ್ದ ಲಕ್ಷ್ಮಿ(65) ಅವರ ಮೃತದೇಹದ ಮೂಗು ಮತ್ತು ಕೆನ್ನೆಗಳನ್ನು ಇಲಿ ಕತ್ತರಿಸಿ ತಿಂದಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇಂದು ಬೆಳಿಗ್ಗೆ ಸಂಬಂಧಿಕರು ಶವಾಗಾರದಲ್ಲಿ ಬಂದು ನೋಡಿದಾಗ ಮೃತದೇಹದ ಮೂಗು ಮತ್ತು ಕೆನ್ನೆಗಳು ಇಲಿ ಕಚ್ಚಿ ತಿಂದ ಸ್ಥಿತಿಯಲ್ಲಿತ್ತು.  

ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಸಂಬಂಧಿಕರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗುತ್ತಿದ್ದಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪಾಲಕ್ಕಾಡ್ ಡಿಎಂಒ ಬಳಿ ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. ಈ ಬಗ್ಗೆ ಇಂದು ತನಿಖೆ ನಡೆಸಿ ವರದಿ ನೀಡಲು ಪ್ರಸ್ತಾಪಿಸಲಾಗಿದೆ.



Join Whatsapp