ಕ್ಷುಲ್ಲಕ ಹೇಳಿಕೆಗಾಗಿ ಕಾಶ್ಮೀರದ ಸಾಮಾಜಿಕ ಕಾರ್ಯಕರ್ತನ ಬಂಧನ : ಒಮರ್‌ ಅಬ್ದುಲ್ಲಾ ಆಕ್ರೋಶ

Prasthutha: June 16, 2021

ಶ್ರೀನಗರ : ಹೊರಗಿನವರಿಗಿಂತ ಸ್ಥಳೀಯ ಅಧಿಕಾರಿಗಳು ಸಮಸ್ಯೆಗಳ ಬಗ್ಗೆ ಹೆಚ್ಚು ಅರಿವು ಹೊಂದಬಲ್ಲರು ಎಂಬ ಹೇಳಿಕೆಗಾಗಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಬಂಧಿಸಿರುವುದಕ್ಕೆ ನ್ಯಾಶನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್‌ ಅಬ್ದುಲ್ಲಾ ಖಂಡಿಸಿದ್ದಾರೆ. ಇದು ಕಡಿವಾಣವಿಲ್ಲದ ಆಡಳಿತಶಾಹಿ ಅಧಿಕಾರ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಯಾವುದೇ ಅಪಾಯವಿಲ್ಲದ ಅಭಿಪ್ರಾಯ ವ್ಯಕ್ತಪಡಿಸಿದಕ್ಕಾಗಿ ವ್ಯಕ್ತಿಯೊಬ್ಬರನ್ನು ಜೈಲಿಗೆ ಹಾಕುವುದನ್ನು ಒಪ್ಪಲಾಗದು ಎಂದು ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಸಫಾಪೋರದ ಸಜದ್‌ ರಶಿ ಸೋಫಿ ಎಂಬವರು ಕೆಲವು ದಿನಗಳ ಹಿಂದೆ ನಡೆದ ʼಜನತಾ ದರ್ಬಾರ್‌ʼ ನಲ್ಲಿ ಲೆಫ್ಟಿನೆಂಟರ್‌ ಗವರ್ನರ್‌ ಅವರ ಸಲಹೆಗಾರ ಬಶೀರ್‌ ಖಾನ್‌ ಅವರನ್ನು ಉಲ್ಲೇಖಿಸಿ ಮಾತನಾಡುತ್ತಾ, ಜನರ ಸಮಸ್ಯೆಗಳ ಬಗ್ಗೆ ನೀವು ಸ್ಥಳೀಯರಾಗಿರುವುದರಿಂದ ಕೇಂದ್ರಾಡಳಿತ ಪ್ರದೇಶದಿಂದ ಹೊರಗಿನವರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲಿರಿ ಎಂದಿದ್ದರು. ಮನ್ಸ್‌ ಬಲ್‌ ನಲ್ಲಿ ನಡೆದ ಈ ಜನತಾ ದರ್ಬಾರ್‌ ನಲ್ಲಿ ಈ ರೀತಿಯಾಗಿ ಮಾತನಾಡಿದ್ದಕ್ಕೆ ಸಜದ್‌ ಅವರನ್ನು ಬಂಧಿಸಲಾಗಿದೆ.

ಗಂಡೆರ್ಬಾಲ್‌ ಜಿಲ್ಲಾಧಿಕಾರಿ, ಉತ್ತರ ಪ್ರದೇಶ ಮೂಲದ ಐಎಎಸ್‌ ಅಧಿಕಾರಿ ಕೃತಿಕಾ ಜ್ಯೋತ್ಸ್ನಾ ಅವರಿಗೆ ಈ ಹೇಳಿಕೆ ಸರಿಬರಲಿಲ್ಲ. ಆಕೆ ಸಜದ್‌ ಅವರ ಹೇಳಿಕೆಗೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಸಜದ್‌ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ. ಶನಿವಾರ ಅವರಿಗೆ ಜಾಮೀನು ಲಭ್ಯವಾಗಿದೆ.    

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ