ರಾಮ ಮಂದಿರ ಭೂಮಿ ಖರೀದಿ ಅವ್ಯವಹಾರ ಆರೋಪ ; ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ : ಸುರ್ಜೆವಾಲ

Prasthutha|

ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಭೂಮಿ ಖರೀದಿ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯ ಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಒತ್ತಾಯಿಸಿದ್ದಾರೆ.

- Advertisement -

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಟ್ರಸ್ಟ್ ಸ್ಥಾಪನೆಯಾಗಿದೆ, ನ್ಯಾಯಾಲಯ ಅದನ್ನು ಅರಿತುಕೊಂಡು ಸಮಸ್ಯೆ ಮತ್ತು ವಿಷಯ ತನಿಖೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಟ್ರಸ್ಟ್ ಸಂಗ್ರಹಿಸಿದ ದೇಣಿಗೆ ಮತ್ತು ಖರ್ಚಾದ ಮೊತ್ತದ ಬಗ್ಗೆಯೂ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಲೆಕ್ಕಪರಿಶೋಧಿಸಬೇಕು ಎಂದು ಅವರು ಹೇಳಿದರು.

ರಾಮ ಜನ್ಮ ಭೂಮಿ ಭೂ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಮಾಜವಾದಿ ಪಕ್ಷ ಮತ್ತು ಎಎಪಿ ಮುಖಂಡರು ಆರೋಪಿಸಿದ ಬಳಿಕ ವಿವಾದ ಸೃಷ್ಟಿಯಾಗಿದೆ. ಆದರೆ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಆರೋಪಗಳನ್ನು ತಳ್ಳಿ ಹಾಕಿದೆ.



Join Whatsapp