ಒಂದು ಬಿಪಿಎಲ್ ಕುಟುಂಬಕ್ಕೆ ತಿಂಗಳಿಗೆ ಎಷ್ಟು ವಿದ್ಯುತ್ ಬಿಲ್ ಬರುತ್ತದೆ ಎಂಬ ಮಾಹಿತಿಯನ್ನು ಸರ್ಕಾರ ಕೇಳಿತ್ತು. ಮೆಸ್ಕಾಂ ಈ ಕುರಿತು ನೀಡಿದ ಮಾಹಿತಿಯ ಲೆಟ್ ಹೆಡ್ ದುರುಪಯೋಗಪಡಿಸಿಕೊಂಡ ಕೆಲವರು ಬಡವರ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಮೆಸ್ಕಾಂ ಸ್ಪಷ್ಟಪಡಿಸಿದೆ.
ಮೆಸ್ಕಾಂ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ್ ಶೆಟ್ಟಿ ‘ಪ್ರಸ್ತುತ’ಕ್ಕೆ ಸ್ಪಷ್ಟನೆ ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಯಾವುದೇ ಬಿಲ್ ಮನ್ನಾ ಮಾಡಿ ಆದೇಶ ಹೊರಡಿಸಿಲ್ಲ ಎಂದು ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮೂರು ತಿಂಗಳು ಮೆಸ್ಕಾಂ ಬಿಲ್ ಮನ್ನಾ ಮಾಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಆದರೆ ಇದು ಸುಳ್ಳು ಸುದ್ದಿ ಎಂದು ಮೆಸ್ಕಾಂ ಸ್ಪಷ್ಟಪಡಿಸಿದೆ