ಉತ್ತರ ಪ್ರದೇಶ ಸಚಿವ ಸಂಪುಟ ವಿಸ್ತರಣೆ ಕೋಲಾಹಲ | ಪ್ರಧಾನಿ ಮೋದಿ – ಸಿಎಂ ಆದಿತ್ಯನಾಥ್‌ ಭೇಟಿ

Prasthutha|

ನವದೆಹಲಿ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವ ನಡುವೆ, ರಾಜ್ಯ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ವ್ಯಾಪಕ ಕೋಲಾಹಲ ಸೃಷ್ಟಿಯಾಗಿರುವ ನಡುವೆ ಅಲ್ಲಿನ ಸಿಎಂ ಆದಿತ್ಯನಾಥ್‌ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಅವರು ರಾಷ್ಟ್ರ ರಾಜಧಾನಿಯಲ್ಲಿ ಹಿರಿಯ ಬಿಜೆಪಿ ನಾಯಕರನ್ನೂ ಭೇಟಿಯಾಗಲಿದ್ದಾರೆ.

- Advertisement -

ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಆದಿತ್ಯನಾಥ್‌ ಮತ್ತು ಪ್ರಧಾನಿ ನಡುವೆ ಸುಮಾರು ಒಂದು ಗಂಟೆಯ ಮಾತುಕತೆ ನಡೆಯಿತು ಎಂದು ವರದಿಗಳು ತಿಳಿಸಿವೆ.

ಉತ್ತರ ಪ್ರದೇಶ ಸರಕಾರದ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಗಳು ನಡೆಯುವ ಸಾಧ್ಯತೆಗಳಿದ್ದು, ಈ ಸಂಬಂಧ ಹಲವು ಸಭೆಗಳು ನಡೆದಿವೆ. ಇನ್ನೊಂದೆಡೆ, ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆರೆಸ್ಸೆಸ್‌ ಮುಖಂಡರು ರಾಜ್ಯದಲ್ಲಿ ತಮ್ಮ ಸಂಘಟನೆಯಿಂದ ಬೆಂಬಲಿತವಾಗಿರುವ ಬಿಜೆಪಿಯ ಆಡಳಿತ ಕುರಿತು ಹಲವು ಸುತ್ತಿನ ಮಾತುಕತೆಗಳನ್ನೂ ನಡೆಸಿದ್ದಾರೆ.

- Advertisement -

ಇನ್ನೊಂದೆಡೆ, ಕಾಂಗ್ರೆಸ್‌ ನ ಪ್ರಮುಖ ನಾಯಕ ಜಿತಿನ್‌ ಪ್ರಸಾದ್‌ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ, ಕೋವಿಡ್‌ ನಿರ್ವಹಣೆಯಲ್ಲಿ ಆದಿತ್ಯನಾಥ್‌ ಸರಕಾರದ ಬಗ್ಗೆ ಜನತೆ ಸೇರಿದಂತೆ, ಸ್ವತಃ ಬಿಜೆಪಿ ಶಾಸಕರಿಂದಲೇ ಅಸಮಾಧ ವ್ಯಕ್ತವಾಗುತ್ತಿರುವ ನಡುವೆ, ಪ್ರಧಾನಿ ಮತ್ತು ಆದಿತ್ಯನಾಥ್‌ ಭೇಟಿ ಹೆಚ್ಚು ಮಹತ್ವವನ್ನು ಪಡೆದಿದೆ.



Join Whatsapp