ದೆಹಲಿಯಲ್ಲಿ ವಾಹನಗಳ ವೇಗ ಮಿತಿ ನಿಗದಿಪಡಿಸಿದ ಕೇಂದ್ರ ಸರ್ಕಾರ ; ಅತಿ ವೇಗಕ್ಕೆ ಭಾರಿ ದಂಡ!

Prasthutha|

ಹೊಸದಿಲ್ಲಿ: ಕೇಂದ್ರ ಸರ್ಕಾರ ರಾಷ್ಟ್ರ ರಾಜಧಾನಿ ದೆಹಲಿಯ ನಗರಗಳಲ್ಲಿ ವಾಹನಗಳ ವೇಗದ ಮಿತಿಯನ್ನು ನಿಗದಿ ಮಾಡಿದ್ದು, ಉಲ್ಲಂಘಿಸಿದರೆ ಭಾರೀ ದಂಡ ವಿಧಿಸಲು ಸೂಚನೆ ನೀಡಿದೆ.

- Advertisement -

ಕೇಂದ್ರ ಸರ್ಕಾರವು ದೆಹಲಿಯ ಹೆಚ್ಚಿನ ರಸ್ತೆಗಳಲ್ಲಿ ಕಾರಿನ ವೇಗದ ಮಿತಿಯನ್ನು ಗಂಟೆಗೆ 60-70 ಕಿ.ಮೀ.ಗೆ ನಿಗದಿಪಡಿಸಿದೆ, ಆದರೆ ದ್ವಿಚಕ್ರ ವಾಹನಗಳ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 50-60 ಕಿ.ಮೀ.ಗೆ ನಿಗದಿಪಡಿಸಲಾಗಿದೆ. ವಸತಿ ಮತ್ತು ವಾಣಿಜ್ಯ ಮಾರುಕಟ್ಟೆಗಳ ಎಲ್ಲಾ ರಸ್ತೆಗಳಲ್ಲಿ ಕಾರುಗಳು ಮತ್ತು ಬೈಕುಗಳ ಗರಿಷ್ಠ ವೇಗದ ಮಿತಿಗಂಟೆಗೆ 30 ಕಿ.ಮೀ. ಬಸ್ ಗಳು, ಟೆಂಪೋ ಮತ್ತು ತ್ರಿಚಕ್ರ ವಾಹನಗಳಿಗೆ ಗರಿಷ್ಠ ವೇಗದ ಮಿತಿಯನ್ನು ಸರ್ಕಾರ ಗಂಟೆಗೆ 40 ಕಿ.ಮೀ.ಗೆ ನಿಗದಿಪಡಿಸಿದೆ. ದೆಹಲಿ ಸಂಚಾರ ಪೊಲೀಸರು ವೇಗ ಮಿತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.

DNDಯಲ್ಲಿ ಕಾರುಗಳ ವೇಗದ ಮಿತಿ ಗಂಟೆಗೆ 70 ಕಿ.ಮೀ ಮತ್ತು ದ್ವಿಚಕ್ರ ವಾಹನಗಳಿಗೆ ಗಂಟೆಗೆ 60 ಕಿ.ಮೀ. ಬರ್ಪುಲಾ ಫ್ಲೈಓವರ್ ನಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಗರಿಷ್ಠ ವೇಗದ ಮಿತಿ ಗಂಟೆಗೆ 60ಕಿ.ಮೀ.ಮಿತಿ ನೀಡಲಾಗಿದೆ.

Join Whatsapp