ಕಲ್ಮಡ್ಕ : ಆಟದ ಮೈದಾನ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ | ತನಿಖೆಗೆ SDPI ಆಗ್ರಹ

Prasthutha|

ಕಲ್ಮಡ್ಕ : ಕಲ್ಮಡ್ಕ ಗ್ರಾ.ಪಂ ವ್ಯಾಪ್ತಿಯಲ್ಲಿ 2015-16 ನೆ ಸಾಲಿನ ಗ್ರಾಮ ವಿಕಾಸ ಯೋಜನೆಯ ಹೆಸರಿನಲ್ಲಿ ನಡೆದ ಹೊನಲು ಬೆಳಕಿನ ಆಟದ ಮೈದಾನ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ SDPI ಆಗ್ರಹಿಸಿದೆ.

- Advertisement -

ದ.ಕ ಜಿಲ್ಲೆ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಯ ಮೈದಾನಕ್ಕೆ 2015-16ನೇ ಸಾಲಿನಲ್ಲಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಹೊನಲು ಬೆಳಕಿನ ಆಟದ ಮೈದಾನ ನಿರ್ಮಾಣಕ್ಕೆಂದು 9 ಲಕ್ಷ  ಹಣ ಮಂಜೂರು ಮಾಡಲಾಗಿತ್ತು, ಆ ಸಂದರ್ಭದಲ್ಲಿ ಗ್ರಾಮಸ್ತರಿಗೆ ಸರ್ಕಾರದಿಂದ ಹಣ ಮಂಜೂರು ಗೊಳಿಸಲಾಗಿದೆ ಎಂಬ ಮಾಹಿತಿ ತಿಳಿದಿರಲಿಲ್ಲ, ಹಾಗಾಗಿ ಇಲ್ಲಿನ  ಗ್ರಾಮಸ್ತರು ಸೇರಿ ಶ್ರಮದಾನ ನಡೆಸುವ ಮೂಲಕ ಮೈದಾನವನ್ನು ಸ್ವಲ್ಪ ಅಗಳಗೊಳಿಸಲಾಗಿತ್ತು.





ಆದರೆ ಕೆಲವು ದಿನಗಳ ಹಿಂದೆ ಗ್ರಾಮಸ್ಥರೊಬ್ಬರು ಅಲ್ಲಿಗೆ ತೆರಳಿ ಈ ಮೈದಾನದ ಹೆಸರಿನಲ್ಲಿ 9 ಲಕ್ಷ ರುಪಾಯಿ ಅಕ್ರಮ ನಡೆದಿದೆಯೆಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ದಿನಾಂಕ 9/06/2021 ರಂದು ಅದರ ಸತ್ಯಾಸತ್ಯತೆ ತಿಳಿಯಲೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತಂಡ ಆ ಮೈದಾನಕ್ಕೆ ಬೇಟಿ ನೀಡಿ ಪರಿಶೀಲಿಸಿತ್ತು,ವೀಡಿಯೋದಲ್ಲಿ ಆ ಗ್ರಾಮಸ್ತ ಹೇಳಿದಂತೆ ಅಲ್ಲಿ ಯಾವುದೇ ರೀತಿಯ ಹೊನಲು ಬೆಳಕಿನ ಗ್ಯಾಲರಿ ಕ್ರೀಡಾಂಗಣ ಇಲ್ಲದೆ ಇರುವುದು ಕಂಡು ಬಂದಿದೆ.ಮಾತ್ರವಲ್ಲದೆ ಮೈದಾನದ ಬದಿಯಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಹೆಸರಿನಲ್ಲಿ ಆ ಕಾಮಗಾರಿಯ ವಿವರಗಳನ್ನು ಒಳಗೊಂಡಿರುವಂತಹ ಶಿಲನ್ಯಾಸದ ಕಪ್ಪು ಕಲ್ಲು   ಗಿಡ ಗಂಟಿ ನೊಳಗೆ  ಆವೃತವಾಗಿರುವುದು ಕಂಡು ಬಂದಿದೆ.ಅದರಲ್ಲಿ ಆ ಕಾಮಗಾರಿಯ ಸಂಪೂರ್ಣ ವಿವರಗಳನ್ನು ನಮೂದಿಸಲಾಗಿದೆ.

- Advertisement -

ಅದರಲ್ಲಿರುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ವತಿಯಿಂದ ಸುಳ್ಯ ತಾಲೂಕಿನ ಕಲ್ಮಡ್ಕ ಎಂಬಲ್ಲಿ ಸರ್ವೆ ನಂ 130 ರಲ್ಲಿ ಸಾರ್ವಜನಿಕ ಹೊನಲು ಬೆಳಕಿನ ಆಟದ ಮೈದಾನ ನಿರ್ಮಾಣವನ್ನು ಅಂದಾಜು 9 ಲಕ್ಷ ರುಪಾಯಿ ವೆಚ್ಚದಲ್ಲಿ ಕೆ.ಆರ್.ಡಿ.ಸಿ.ಎಲ್ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ) ದಿಂದ ನಿರ್ಮಾಣ ಗೊಳಿಸಲಾಗಿದೆ ಎಂದು ಸ್ಪಷ್ಟವಾಗಿ ಬರೆದಿರುತ್ತದೆ.

ಆದರೆ ಪ್ರಸಕ್ತ ಸ್ಥಳದಲ್ಲಿ ಅಂತಹ ಯಾವುದೇ ಹೊನಲು ಬೆಳಕಿನ ಮೈದಾನ ಇರುವುದಿಲ್ಲ. ಆದ್ದರಿಂದ ಈ ಒಂದು ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿರುತ್ತದೆ.ಅದಲ್ಲದೇ ಕಲ್ಮಡ್ಕ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಇಂತಹ ಅಕ್ರಮ ನಡೆದಿದ್ದರು ಪಂಚಾಯತ್ ವತಿಯಿಂದ ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳು  ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದೆ ಮುಚ್ಚಿಟ್ಟಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿ ಕೊಟ್ಟಿರುತ್ತದೆ.ಹಾಗಾಗಿ ಈ ಪ್ರಕರಣವು ಸೇರಿದಂತೆ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ,2015 ರಿಂದ ಪಂಚಾಯತ್ ಮೂಲಕ ಅನುಮೋದನೆಗೊಂಡ ಎಲ್ಲಾ ಯೋಜನೆಗಳ ಅಥವಾ ಕಾಮಗಾರಿಗಳ ಸಮಗ್ರವಾದ ತನಿಖೆ ನಡೆಸಿ ಭ್ರಷ್ಟಾಚಾರ ನಡೆದಿರುವುದು ಕಂಡು ಬಂದರೆ ತಪ್ಪಿತಸ್ಥ ಅಧಿಕಾರಿಗಳ ಮತ್ತು ಇದರಲ್ಲಿ ಬಾಗಿದಾರಿಗಳಾದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು SDPI ಕಲ್ಮಡ್ಕ ಗ್ರಾಮ ಸಮಿತಿ ಆಗ್ರಹಿಸಿದೆ.

ಹಾಗೂ ಜಿಲ್ಲಾಧಿಕಾರಿಗಳಿಗೆ Email ಮತ್ತು ವಾಟ್ಸಪ್ ಮೂಲಕ ದೂರನ್ನು ಸಲ್ಲಿಸಲಾಗಿದೆ ಎಂದು ಪಕ್ಷದ ಪ್ರಕಟನೆ ತಿಳಿಸಿದೆ.



Join Whatsapp