ಮಂಗಳೂರು : ಖಾಸಗಿ ಟಿವಿ ಕಾರ್ಯಕ್ರಮದ ಆಡಿಯೋ ಎಡಿಟ್ ಮಾಡಿ ಹಂಚಿದ ಆರೋಪ | ಸುನಿಲ್ ಬಜಿಲಕೆರಿ‌ ಪೊಲೀಸ್ ವಶಕ್ಕೆ

Prasthutha|

ಮಂಗಳೂರು : ಖಾಸಗಿ ಟಿವಿ ಚಾನಲ್ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಯುವತಿಯ ಆಡಿಯೋ ಒಂದನ್ನು ಎಡಿಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡ ಆರೋಪದಲ್ಲಿ ಸುನಿಲ್ ಬಜಿಲಕೆರಿಯನ್ನು ಪೊಲೀಸರು ಬಂಧಿಸಿದ್ದಾರೆ.   

- Advertisement -

ಖಾಸಗಿ ಟಿವಿ ಚಾನಲ್ ಕಾರ್ಯಕ್ರಮ ಒಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಪರವಾಗಿ ಯುವತಿಯೊಬ್ಬಳು ಕರೆ ಮಾಡಿ ಮಾತನಾಡಿದ ಆಡಿಯೋ ಒಂದನ್ನು ಎಡಿಟ್ ಮಾಡಿ ಯುವತಿ ರಾಜ್ಯಾಧ್ಯಕ್ಷರನ್ನು ನಿಂದಿಸಿದ್ದಾಳೆಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪಿಯನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಿಂದೆ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಸುನಿಲ್ ಬಜಿಲಕೆರಿ, ಇತ್ತೀಚೆಗೆ ಹೊರಬಂದು ಹಿಂದುತ್ವಕ್ಕೆ ವಿರುದ್ಧವಾಗಿ ಬಂಧುತ್ವ ಎಂಬ ಸಂಘಟನೆಯನ್ನು ಕಟ್ಟಿಕೊಂಡಿದ್ದರು.



Join Whatsapp