‘ನನಗೆ ನ್ಯಾಯ ಸಿಗದೇ ಹೋದಲ್ಲಿ ನವಜಾತ ಮಗುವಿನೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರುತ್ತೇನೆ’: ವೈದ್ಯ ರಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತೆ ಜಾಸ್ಮೀನ್ ಹೇಳಿಕೆ

Prasthutha|

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಪೊಲೀಸ್ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಿಕೊಡಬೇಕು. ಪ್ರಭಾವಿ ವೈದ್ಯರೇ ನನಗೆ ಅನ್ಯಾಯ ಮಾಡಿರುವಾಗ ಆರೋಗ್ಯ ಇಲಾಖೆಯ ತನಿಖಾ ತಂಡದಿಂದ ನನಗೆ ನ್ಯಾಯ ಸಿಗುವ ಭರವಸೆ ಇಲ್ಲ. ಇಷ್ಟೆಲ್ಲಾ ಆದ ಮೇಲೂ ನನಗೆ ನ್ಯಾಯ ಸಿಗದೇ ಹೋದಲ್ಲಿ ನಾನು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನನ್ನ ನವಜಾತ ಶಿಶುವಿನೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಿದ್ದೇನೆ ಎಂದು ಮಂಗಳೂರಿನ ಕೆಲವು ವೈದ್ಯರು ಮತ್ತು ಆಸ್ಪತ್ರೆಗಳಿಂದ ಚಿಕಿತ್ಸೆ ನಿರಾಕರಿಸಲ್ಪಟ್ಟಿದ್ದ ಸಂತ್ರಸ್ತೆ ಜಾಸ್ಮೀನ್ ವೀಡಿಯೋ ಒಂದರಲ್ಲಿ ಹೇಳಿಕೆ ನೀಡಿದ್ದಾರೆ.

- Advertisement -


ಇತ್ತೀಚೆಗೆ ಮಂಗಳೂರಿನ ಕೆಲವೊಂದು ವೈದ್ಯರು ಮತ್ತು ಆಸ್ಪತ್ರೆಗಳು 8 ತಿಂಗಳ ಗರ್ಭಿಣಿ ಜಾಸ್ಮೀನ್ ರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಕುರಿತು ಸಂತ್ರಸ್ತೆ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರು. ಆ ಬಳಿಕ ತನಗಾದ ಅನ್ಯಾಯದ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಆದರೆ ಆ ದೂರನ್ನು ಎಫ್ ಐ ಆರ್ ಮಾಡದೆ, ಜಾಸ್ಮೀನ್ ಕುಟುಂಬದ ವಿರುದ್ಧವೇ ಪೊಲೀಸರು ದೂರು ದಾಖಲಿಸಿ ಇಬ್ಬರನ್ನು ಬಂಧಿಸಿದ್ದರು. ಆ ಬಳಿಕ ಘಟನೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಒಂದು ತನಿಖಾ ತಂಡ ರಚಿಸಿದೆ. ಆದರೆ ನನಗೆ ವೈದ್ಯರೇ ನಡೆಸುವ ಆ ತನಿಖೆಯ ಮೇಲೆ ವಿಶ್ವಾಸವಿಲ್ಲ ಎಂದು ಜಾಸ್ಮೀನ್ ಹೇಳಿದ್ದಾರೆ.



Join Whatsapp