PNB ವಂಚಕ ಮೆಹುಲ್ ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮೆನಿಕಾ ಕೋರ್ಟ್

Prasthutha|

ಹೊಸದಿಲ್ಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ಗೆ ಸಾವಿರಾರು ಕೋಟಿ ವಂಚಿಸಿ ಇದೀಗ ವಿದೇಶದಲ್ಲಿರುವ ಉದ್ಯಮಿ ಮೆಹುಲ್ ಚೋಕ್ಸಿಯ ಜಾಮೀನು ಅರ್ಜಿಯನ್ನು ಡೊಮೆನಿಕಾ ಕೋರ್ಟ್ ವಜಾಗೊಳಿಸಿದೆ.

- Advertisement -

ಡೊಮಿನಿಕಾ ಕೋರ್ಟ್​​ ಆಂಟಿಗುವಾದಿಂದ ಡೊಮಿನಿಕಾಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಕುರಿತು ಮೆಹುಲ್ ಚೋಕ್ಸಿಯನ್ನು ವಿಚಾರಣೆ ನಡೆಸಿದ್ದು, ಈ ಪ್ರಕರಣ ಸಂಬಂಧ ಅವರಿಗೆ ಜಾಮೀನು ನಿರಾಕರಿಸಲಾಗಿದೆ ಎಂದು ಅವರ ಪರ ವಕೀಲ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ. ಇಂದು ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡುವ ವಿಚಾರಕ್ಕೆ ಸಂಬಂಧಿಸಿ ಮತ್ತೊಂದು ವಿಚಾರಣೆ ನಡೆಯಲಿದ್ದು, ಈ ವಿಚಾರಣೆಗೆ ಚೋಕ್ಸಿ ಕೂಡ ಹಾಜರಾಗುವ ಸಾಧ್ಯತೆ ಇದೆ.

ಮೇ 23 ರಂದು ಊಟ ಮಾಡಲು ತೆರಳಿದ್ದ ವೇಳೆ ಆಂಟಿಗುವಾದಿಂದ ನಾಪತ್ತೆಯಾಗಿದ್ದ ಮೆಹುಲ್ ಚೋಕ್ಸಿಯನ್ನು ಆಂಟಿಗುವಾ ಪೊಲೀಸರು ತೀವ್ರ ಶೋಧ ನಡೆಸಿ ಡೊಮೆನಿಕಾದಲ್ಲಿ ಬಂಧಿಸಿದ್ದರು. ಡೊಮೆನಿಕಾಗೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು ಎನ್ನಲಾಗಿದೆ.



Join Whatsapp