‘ಕನ್ನಡ ಕಿಂಕರ’ ಎಂದು ಖ್ಯಾತರಾಗಿದ್ದ ಹಿರಿಯ ಸಾಹಿತಿ ಭೀಮಯ್ಯ ಮೇಷ್ಟ್ರು ಇನ್ನಿಲ್ಲ

Prasthutha|

ಚಿತ್ರದುರ್ಗ : ಕನ್ನಡ ಕಿಂಕರ, ಭೀಮಯ್ಯ ಮೇಷ್ಟ್ರು ಎಂದು ಖ್ಯಾತರಾಗಿದ್ದ ಹಿರಿಯ ಸಾಹಿತಿ ಭೀಮಯ್ಯ ನಿಧನರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರೇನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ ಜನಸಿದ ಭೀಮಯ್ಯ ಅವರು, ಬಿಎಸ್ಸಿ ಪದವಿ ಪಡೆದ ಬಳಿಕ, ಸರ್ಕಾರಿ ಕೆಲಸಕ್ಕೆ ಸೇರಿದ್ದರು. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅವರು ನಾಟಕ, ಕಾವ್ಯ, ವಚನಗಳನ್ನು ರಚಿಸಿದ್ದಾರೆ.

- Advertisement -

96 ವರ್ಷದ ಭೀಮಯ್ಯ ಅವರು, ಸತ್ವ ಪರೀಕ್ಷೆ, ಜೀವನಾಮೃತ, ದೇವಿ ಮಹಾತ್ಮೆ ಕತೆ ಆಧರಿಸಿ ಚಿದಾನಂದ ಲೀಲೆ, ರಾಮಾಯಣ ಸಂದರ್ಶನದ ಮೂಲಕ ರಾಮಾಯಣ ದರ್ಶನಂ ಮಹಾಕಾವ್ಯದ ಸರಳ ಗದ್ಯಾನುವಾದ ಮಾಡಿದ್ದರು. ಇದಲ್ಲದೇ ಮಂಕು ಭೀಮನ ಬೊಗಳೆ ಎಂಬ ಕೃತಿ ರಚಿಸಿದ್ದರು.
ಇವರ ಸೇವೆಯನ್ನು ಗುರುತಿಸಿ ಹಿರಿಯೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಪಟ್ಟನಾಯಕನಹಳ್ಳಿ ಮಠದಿಂದ ನೀಡುವ ಸ್ಪಟಿಕಶ್ ಪ್ರಶಸ್ತಿ, ತತ್ವಜ್ಞಾನಿ ಪಟೇಲ್ ಬೊಮ್ಮಗೌಡ ಸ್ಮಾರಕ ತತ್ವಶ್ರೀ ಪ್ರಶಸ್ತಿಗಳು ಇವರಿಗೆ ಸಂದಿದ್ದವು.
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದ ಅವರು, ‘ಕನ್ನಡ ಕಿಂಕರ’ ‘ಭೀಮಯ್ಯ ಮೇಷ್ಟ್ರು’ ಎಂದೇ ಖ್ಯಾತರಾಗಿದ್ದರು.



Join Whatsapp