ದೇಶದಲ್ಲಿ ಪತ್ತೆಯಾಗಿದ್ದಕ್ಕಿಂತಲೂ 20 ಪಟ್ಟು ಹೆಚ್ಚು ಕೋವಿಡ್‌ : ವರದಿ

Prasthutha|

ನವದೆಹಲಿ : ಕಳೆದ ವರ್ಷ ದೇಶದಲ್ಲಿ ಕೋವಿಡ್‌ ವರದಿಯಾದ ನಂತರ ಮೇ 15ರ ವರೆಗೆ ಅಧಿಕೃತವಾಗಿ ವರದಿಯಾಗಿರುವುದಕ್ಕಿಂತಲೂ 20 ಪಟ್ಟು ಹೆಚ್ಚು ಮಂದಿಗೆ ಕೋವಿಡ್‌ ಸೋಂಕು ತಗುಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

- Advertisement -

ಮೇ ೧೫ರ ವೇಳೆಗೆ ದೇಶದಲ್ಲಿ 2.47 ಕೋಟಿ ಮಂದಿ ಸೋಂಕಿತರಾಗಿದ್ದಾರೆ. ಆದರೆ, 49.2 ಕೋಟಿ ಮಂದಿಗೆ ಸೋಂಕು ತಗುಲಿರುವ ಬಗ್ಗೆ ಅಂದಾಜಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಂದರೆ, ಸೋಂಕು ಮೊದಲು ಪತ್ತೆಯಾದ ಬಳಿಕ ಇಲ್ಲಿ ವರೆಗೆ ಶೇ.36ರಷ್ಟು ಮಂದಿಗೆ ಸೋಂಕು ತಗುಲಿದಂತಾಗಿದೆ. ಮೇ 15ರ ವೇಳೆಗೆ ದೇಶದಲ್ಲಿ 2,69,700 ಮಂದಿ ಕೋವಿಡ್‌ ನಿಂದ ಮೃತಪಟ್ಟಿರುವುದಾಗಿ ಅಧಿಕೃತ ಅಂಕಿ ಅಂಶಗಳು ತಿಳಿಸುತ್ತವೆ. ಆದರೆ, ಅಧ್ಯಯನ ಪ್ರಕಾರ 12.1 ಲಕ್ಷ ಸಾವು ಸಂಭವಿಸಿರಬಹುದು ಎಂದುವಿಜ್ಞಾನಿಗಳು ಅಂದಾಜಿಸಿರುವುದಾಗಿ ವರದಿಯೊಂದು ತಿಳಿಸಿದೆ.

- Advertisement -

ಮಿಶಿಗನ್‌ ವಿಶ್ವವಿದ್ಯಾಲಯ, ಕೊಲ್ಕತಾದಲ್ಲಿರುವ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ, ಜಾನ್ಸ್‌ ಹಾಪ್ಕಿನ್ಸ್‌ ಬ್ಲೂಮ್‌ ಬರ್ಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ ನ ತಜ್ಞರು ಈ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬಿಡುಗಡೆಗೊಳಿಸಿರುವ ಅಂಕಿಅಂಶಗಳನ್ನೂ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.  

Join Whatsapp