ನವದೆಹಲಿ : ಕೋವಿಡ್ ಸೋಂಕಿನಿಂದ ಕಳೆದ ಒಂದು ವರ್ಷದಿಂದ ಸುಮಾರು 67 ಪತ್ರಕರ್ತರು ಸಾವಿಗೀಡಾಗಿದ್ದಾರೆ. ಈ ಪತ್ರಕರ್ತರ ಕುಟುಂಬಿಕರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಧರಿಸಿದೆ.
ಐಬಿ ಸಚಿವಾಲಯದ ಕಾರ್ಯದರ್ಶಿ ಅಮಿತ್ ಖರೆ ಅಧ್ಯಕ್ಷತೆಯ ಪತ್ರಕರ್ತರ ಅಭಿವೃದ್ಧಿ ಯೋಜನೆಯ ಸಮಿತಿಯು ಮಂಡಿಸಿರುವ ಪ್ರಸ್ತಾಪವನ್ನು ಸರಕಾರ ಒಪ್ಪಿಕೊಂಡಿದೆ. ಆ ಪ್ರಕಾರ, ಈ ವರ್ಷ ಮೃತರಾದ 26 ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ ವರ್ಷ 41 ಪತ್ರಕರ್ತರು ಹಾಗೂ ಈ ವರ್ಷ 26 ಪತ್ರಕರ್ತರು ಸಾವಿಗೀಡಾಗಿದ್ದಾರೆ. ಮೃತ ಪತ್ರಕರ್ತರ ಕುಟುಂಬಗಳಿಗೆ ಪರಿಹಾರ ಸಿಗಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.