ಅಜ್ಞಾನಿ ಮತಾಂಧರು ಲಕ್ಷದ್ವೀಪವನ್ನು ನಾಶಪಡಿಸುತ್ತಿದ್ದಾರೆ : ಹೊಸ ನೀತಿಗಳ ವಿರುದ್ಧ ಕಿಡಿ ಕಾರಿದ ರಾಹುಲ್ ಗಾಂಧಿ

Prasthutha|

ಕೇಂದ್ರ ಸರ್ಕಾರ ಲಕ್ಷದ್ವೀಪದಲ್ಲಿ ಅಧಿಕಾರ ದುರುಪಯೋಗಪಡಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಕ್ಷ ದ್ವೀಪವನ್ನು ಅಧಿಕಾರದಲ್ಲಿರುವ ಅಜ್ಞಾನಿ ಮತಾಂಧರು ನಾಶಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರನ್ನು ತಕ್ಷಣ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದ ಒಂದು ದಿನದ ನಂತರ ರಾಹುಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -


ಪ್ರಫುಲ್ ಪಟೇಲ್ ದ್ವೀಪಗಳ ಶಾಂತಿ ಮತ್ತು ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ, ಮಾತ್ರವಲ್ಲ ಅನಿಯಂತ್ರಿತ ನಿರ್ಬಂಧಗಳನ್ನು ಹೇರುವ ಮೂಲಕ ಅಲ್ಲಿನ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ. ಲಕ್ಷದ್ವೀಪವು ಸಾಗರದಲ್ಲಿ ಭಾರತದ ಅನರ್ಘ್ಯ ರತ್ನವಾಗಿದೆ. ಅಧಿಕಾರದಲ್ಲಿರುವ ಅಜ್ಞಾನಿ ಮತಾಂಧರು ಅದನ್ನು ನಾಶಪಡಿಸುತ್ತಿದ್ದಾರೆ. ನಾನು ಲಕ್ಷದ್ವೀಪದ ಜನರ ಪರವಾಗಿ ನಿಲ್ಲುತ್ತೇನೆ ಎಂದು ರಾಹುಲ್ ಗಾಂಧಿ ಬುಧವಾರ ಟ್ವೀಟ್ ಮಾಡಿದ್ದಾರೆ.


ದ್ವೀಪದಲ್ಲಿ ಇದುವರೆಗೆ ಮದ್ಯ ನಿಷೇಧವಿತ್ತು. ಆದರೆ ಈಗ ಅಲ್ಲಿನ ಆಡಳಿತಾಧಿಕಾರಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದಾರೆ. ಸ್ಥಳೀಯರಿಗೆ ಕಿರುಕುಳ ನೀಡುವ ಉದ್ದೇಶದಿಂದ ಸಮಾಜ ವಿರೋಧಿ ಚಟುವಟಿಕೆ (ಪಾಸಾ) ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಮಾತ್ರವಲ್ಲ ಪಂಚಾಯಿತಿಗಳ ಅಧಿಕಾರವನ್ನು ಕಿತ್ತುಕೊಂಡು ದ್ವೀಪದಲ್ಲಿ ಸರ್ವಾಧಿಕಾರಿ ಆಡಳಿತ ಹೇರಲು ಪ್ರಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement -



Join Whatsapp