ಉತ್ತರ ಪ್ರದೇಶ : ಗ್ರಾಮಸ್ಥರಿಗೆ ಒಮ್ಮೆ ಕೋವ್ಯಾಕ್ಸಿನ್‌, ಮತ್ತೊಮ್ಮೆ ಕೋವಿಶೀಲ್ಡ್‌ ಲಸಿಕೆ ನೀಡಿದ ಆಸ್ಪತ್ರೆ ಸಿಬ್ಬಂದಿ

Prasthutha|

ಲಖನೌ : ಸಿಎಂ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ಕೋವಿಡ್‌ ನಿರ್ವಹಣೆ ಎಷ್ಟೊಂದು ಅವ್ಯವಸ್ಥಿತವಾಗಿದೆ ಎಂಬುದು ಈ ಒಂದು ಘಟನೆಯಿಂದ ಸ್ಪಷ್ಟವಾಗುತ್ತದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಜನರಿಗೆ ಒಮ್ಮೆ ಕೋವ್ಯಾಕ್ಸಿನ್‌, ಮತ್ತೊಮ್ಮೆ ಕೋವಿಶೀಲ್ಡ್‌ ವ್ಯಾಕ್ಸಿನ್‌ ನೀಡಿ ಯಡವಟ್ಟು ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ನೇಪಾಳ ಗಡಿಯ ಸಮೀಪದಲ್ಲಿರುವ ಸಿದ್ಧಾರ್ಥ ನಗರ ಜಿಲ್ಲೆಯ ಗ್ರಾಮವೊಂದರಲ್ಲಿ ಸುಮಾರು ೨೦ ಗ್ರಾಮಸ್ಥರಿಗೆ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಎರಡನ್ನೂ ನೀಡಲಾಗಿದೆ.

- Advertisement -

ಎರಡೂ ಲಸಿಕೆಗಳ ಮಿಶ್ರಣದಿಂದ ಯಾವುದೇ ವ್ಯಕ್ತಿಯ ಆರೋಗ್ಯದಲ್ಲಿ ಪರಿಣಾಮ ಬೀರಿಲ್ಲ ಎನ್ನಲಾಗಿದೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -