ಸರೋಜಿನಿ ಮಹಿಷಿ ವರದಿ ಅನುಸಾರ ನೇಮಕಾತಿ ನಡೆಯಲಿ : ಮಾಜಿ ಶಾಸಕ ಜೆ.ಆರ್.ಲೋಬೋ ಆಗ್ರಹ

Prasthutha|

ಮಂಗಳೂರು: MRPL ಉದ್ಯೋಗ ನೇಮಕಾತಿಯಲ್ಲಿ ಆಗಿರುವ ತಪ್ಪನ್ನು ಸರಿಪಡಿಸಬೇಕು.‌ ಸರೋಜಿನಿ‌ ಮಹಿಷಿ ವರದಿ ಅನುಸಾರ ನೇಮಕಾತಿ ನಡೆಸಬೇಕು ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಆಗ್ರಹಿಸಿದ್ದಾರೆ.

- Advertisement -

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, MRPL ಮಂಗಳೂರಿಗೆ ಬಂದಾಗ ಆರಂಭದಲ್ಲಿ ಪರ – ವಿರೋಧ ವ್ಯಕ್ತವಾಗಿತ್ತು. ಆದ್ರೆ ಉದ್ಯೋಗದ ನಿರೀಕ್ಷೆ ಮಾತ್ರ ಹಸಿರಾಗಿತ್ತು. ಆದ್ರೆ ಬರು-ಬರುತ್ತಾ MRPL ಮೋಸ ಮಾಡಿದೆ ಎಂದ ಅವರು, ಜನರು ಊರು ಒಳ್ಳೆಯದಾಗುತ್ತದೆ, ಉದ್ಯೋಗ ಸಿಗುತ್ತದೆ ಎಂಬ ಜನರ ನಿರೀಕ್ಷೆಗಿಂದು ಮೋಸವಾಗಿದೆ. ಮೊನ್ನೆ ತಾನೇ ಆಗಿರುವಂತಹ 233 ನೇಮಕಾತಿಯಲ್ಲಿ ಕೇವಲ 13 ಮಂದಿ ಮಾತ್ರ ಕರ್ನಾಟಕದವರು ಮಾತ್ರ ಇದ್ದಾರೆ. ಅದ್ರಲ್ಲಿ ನಾಲ್ಕು ಮಂದಿ ಕರಾವಳಿಗೆ ಸ್ಥಾನ ಸಿಕ್ಕಿರೋದು. ಇಲ್ಲಿ ವಿದ್ಯಾವಂತರಿಲ್ಲವೇ ಎಂದು ಪ್ರಶ್ನಿಸಿದ ಜೆ.ಆರ್.ಲೋಬೋ, ಸ್ಥಳೀಯ ಮಂದಿಗೆ ಯಾಕೆ ಆದ್ಯತೆ ಕೊಟ್ಟಿಲ್ಲ.? ಸರೋಜಿನಿ ಮಹಿಷಿ ವರದಿಗೆ ಯಾಕೆ ಮಾನ್ಯತೆ ಕೊಟ್ಟಿಲ್ಲ..? ನಮ್ಮ MRPL ಯೂನಿಯನ್ ನವರು ಕರ್ನಾಟಕದವರಿಗೆ ಆದ್ಯತೆ ಕೊಡಿ ಎಂದು ಹೇಳಿದರೂ ಅವರು ಕ್ಯಾರೇ ಅಂದಿಲ್ಲ ಅಂದರು. ಮೊನ್ನೆ ಸಂಸದರು, ಶಾಸಕರು ಜೊತೆಯಲ್ಲಿ ಹೋಗಿ ಭೇಟಿ ಮಾಡಿ ಸಭೆ ನಡೆಸಿ ಈ ನೇಮಕಾತಿಗೆ ತಡೆ ಕೊಡುತ್ತಾರೆ ಎಂದು ಹೇಳಿಕೆ ನೀಡಿರುವುದು ರಾಜಕೀಯ ಹೇಳಿಕೆ. ಇದು MRPL ಹೇಳಿಕೆ ಅಲ್ಲ ಎಂದರು.

ನಳೀನ್ ರವರು ಏನ್ ಮಾಡುತ್ತಿದ್ದೀರಿ? ನೇಮಕಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿ ಮಾಡುತ್ತೇನೆ ಎಂದು ಹೇಳಿದವರು ಈಗ ಏನಾಯ್ತು ಎಂದು ಪ್ರಶ್ನಿಸಿದರು. ಉದ್ಯೋಗ ನೇಮಕಾತಿಯಲ್ಲಿ ಅನ್ಯಾಯ ಆಗುತ್ತಿರುವಾಗ ನಳೀನ್, ಶೋಭಾ ಏನ್‌ ಮಾಡ್ತಿದ್ದಾರೆ? ನಮ್ಮ ಯುವಕ, ಯುವತಿಯರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ‌ನಮ್ಮಲ್ಲೇ ಉದ್ಯೋಗ ಅವಕಾಶ ಇದ್ದರೂ ಯಾಕೆ ಸ್ಥಳೀಯರಿಗೆ ಉದ್ಯೋಗ ಕೊಡಲು ಹಿಂದೇಟು ಹಾಕಲಾಗ್ತಿದೆ ಎಂದು ಪ್ರಶ್ನಿಸಿದರು. ಎಂಆರ್ ಪಿಎಲ್ ನವರು ಘೋರ ಅನ್ಯಾಯ ಮಾಡುತ್ತಿದ್ದಾರೆ. ನಾನು ಅವತ್ತು MRPL ಗೆ ಜಾಗ ಕೊಡಲು ಹೋಗಿದ್ದ ಅಧಿಕಾರಿಯಲ್ಲಿ ನಾನು ಕೂಡಾ ಓರ್ವ. ಅವತ್ತು ಅಜ್ಜಿ ಕಣ್ಣೀರು ಹಾಕ್ತಿದ್ದ ದೃಶ್ಯ ಈಗಲೂ ಕಣ್ಮುಂದೆ ಬರ್ತಿದೆ. ಅಂತಹ ಕಣ್ಣೀರ ಮಧ್ಯೆ ನಾವು ನಮ್ಮ ಯುವಕರಿಗೆ ಉದ್ಯೋಗ ಸಿಗುತ್ತದೆ ಎಂಬ ನೆಲೆಯಲ್ಲಿ ಜಾಗ ಕೊಡಿಸಿದ್ದೇವೆ. ಈಗ ಅವ್ರೇ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



Join Whatsapp