ಶೋಭಾ ಕರಂದ್ಲಾಜೆಯ ಹೇಳಿಕೆ ಚರ್ಚ್ ಗಳ ಬಗ್ಗೆ ಅಪನಂಬಿಕೆ ಸೃಷ್ಟಿಸಲು ಮಾಡಿರುವ ಪ್ರಯತ್ನ : ಅಲ್ಫೋನ್ಸ್ ಫ್ರಾಂಕೊ

Prasthutha|

ಮಂಗಳೂರು : ಚರ್ಚ್ ಗಳಲ್ಲಿ ಕೋವಿಡ್ ಲಸಿಕೆ ಪಡೆಯಬಾರದೆಂದು ಪ್ರಚಾರ ಪಡಿಸಲಾಗುತ್ತಿದೆ ಎಂಬ ಹೇಳಿಕೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ ಟೀಕಿಸಿದ್ದು, ಇಂತಹಾ ಹೇಳಿಕೆ ನೀಡುವ ಮೂಲಕ ಚರ್ಚ್ ಗಳ ಬಗ್ಗೆ ಅಪನಂಬಿಕೆ ಉಂಟು ಮಾಡುವ ಪ್ರಯತ್ನವನ್ನು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

- Advertisement -

 ಕೋವಿಡ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿ ಜನರು ಆಕ್ಸಿಜನ್, ಬೆಡ್, ವ್ಯಾಕ್ಸಿನ್, ಔಷಧಿಗಳಿಗಾಗಿ ಪರದಾಡುತ್ತಿರುವಾಗ ಪರಿಹಾರ ಕಾರ್ಯದಲ್ಲಿ ಎಲ್ಲೂ ಕಾಣಸಿಗದ ಶೋಭಾ ಏಕಾಏಕಿ ಪತ್ರಿಕಾಗೋಷ್ಠಿಯಲ್ಲಿ ಒಂದು ಧರ್ಮದ ಬಗ್ಗೆ ಅಪನಂಬಿಕೆ ಹುಟ್ಟಿಸುವ ಪ್ರಯತ್ನ ನಡೆಸಿರುವುದು ಅವರ ಕೋಮುವಾದಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮೂಲೆ ಗುಂಪಾಗಿರುವ ಶೋಭಾ ಕರಂದ್ಲಾಜೆ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡಿರುವ ಸಾಧ್ಯತೆಯೂ ಇದೆ. ಕೋವಿಡ್ ಸಂತ್ರಸ್ತರ ಪರಿಹಾರಕ್ಕಾಗಿ ಪ್ರಯತ್ನಿಸುವುದನ್ನು ಬಿಟ್ಟು ಈ ರೀತಿ ಕೋಮು ಭಾವನೆಗಳನ್ನು ಕೆರಳಿಸುವ ತನ್ನ ಎಂದಿನ ಚಾಳಿಯನ್ನು ನಿಲ್ಲಿಸಬೇಕು.ತಮ್ಮ ಕೊಳಕು ರಾಜಕೀಯಕ್ಕಾಗಿ ಧರ್ಮವನ್ನು ಎಳೆದು ತರುವ  ತಮ್ಮ ನೀಚ ಬುದ್ಧಿಯನ್ನು ನಿಲ್ಲಿಸಿ ಈ ಕೂಡಲೇ ಕ್ರಿಶ್ಚಿಯನ್ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಅಲ್ಫೋನ್ಸ್ ಫ್ರಾಂಕೊ ಒತ್ತಾಯಿಸಿದ್ದಾರೆ.



Join Whatsapp