ಗಾಝಾ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್ : ಸಾವಿನ ಸಂಖ್ಯೆ 115ಕ್ಕೇರಿಕೆ

Prasthutha|

ಶಾಂತಿ ಕಾಪಾಡುವಂತೆ ಅಂತಾರಾಷ್ಟ್ರೀಯ ಸಮುದಾಯ ನೀಡಿದ ಕರೆಯನ್ನು ನಿರ್ಲಕ್ಷಿಸಿ ಅಕ್ರಮಿ ಇಸ್ರೇಲ್ ಪಡೆಗಳು ಶುಕ್ರವಾರ ಕೂಡ ಗಾಝಾ ಪಟ್ಟಿಯ ಮೇಲೆ ವೈಮಾನಿಕ ಬಾಂಬ್ ದಾಳಿ ನಡೆಸಿದ್ದು, ಸಾವಿನ ಸಂಖ್ಯೆ 115ಕ್ಕೆ ಏರಿಕೆಯಾಗಿದೆ. ಸಾವನ್ನಪ್ಪಿದವರಲ್ಲಿ 31 ಮಂದಿ ಮಕ್ಕಳು ಸೇರಿದ್ದಾರೆ. 600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಫೆಲೆಸ್ತೀನ್ ಭಾಗದಲ್ಲಿ ಇಸ್ರೇಲ್ ಯುದ್ಧ ಟ್ಯಾಂಕರ್ ಗಳು ಮತ್ತು ಸೇನೆಯನ್ನು ಜಮಾಯಿಸುತ್ತಿದೆ.

- Advertisement -

ಫೆಲೆಸ್ತೀನ್ ಹೋರಾಟಗಾರರು ಕೂಡ ಸತತ 9ನೇ ದಿನವಾದ ಶುಕ್ರವಾರ ಕೂಡ ಇಸ್ರೇಲ್ ಕಡೆಗೆ ರಾಕೆಟ್ ದಾಳಿಗಳನ್ನು ಮುಂದುವರಿಸಿದ್ದಾರೆ. 20ಕ್ಕೂ ಅಧಿಕ ಹೋರಾಟಗಾರರು ಇಸ್ರೇಲ್ ದಾಳಿಯಿಂದ ಸಾವನ್ನಪ್ಪಿದ್ದಾರೆ. ವಾಯು ಪಡೆ ಮತ್ತು ಭೂ ಸೇನಾ ಪಡೆ ದಾಳಿ ನಡೆಸಿದೆ. ಆದರೆ ಈ ಪಡೆಗಳು ಗಾಝಾ ಪ್ರವೇಶಿಸಿಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ.

ಗಾಝಾ ಮೇಲೆ ಯುದ್ಧ ವಿಮಾನ, ಹೆಲಿಕಾಪ್ಟರ್ ಮೂಲಕ ತೀವ್ರ ಶೆಲ್ ದಾಳಿ ನಡೆಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಸೋಮವಾರದಿಂದ ಆರಂಭಗೊಂಡ ಈ ದಾಳಿಯಲ್ಲಿ ಫೆಲೆಸ್ತೀನ್ ನ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಇಸ್ರೇಲ್ ಕಡೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Join Whatsapp