ರಾಜ್ಯದಲ್ಲಿ ಮತ್ತೆ ಇಂಧನ ದರ ಏರಿಕೆ – ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಮಟ್ಟಕ್ಕೆ

Prasthutha|

ಬೆಂಗಳೂರು : ಕೊರೋನ ಸಾಂಕ್ರಮಿಕ ಮತ್ತು ಲಾಕ್ ಡೌನ್ ಗೆ ಜನರು ತತ್ತರಿಸಿರುವ ನಡುವೆಯೇ ಸರಕಾರ ಗಾಯದ ಮೇಲೆ ಬರೆ ಎಳೆಯುತ್ತಲೇ ಇದೆ. ಪೆಟ್ರೋಲ್‌ ಹಾಗೂ ಡಿಸೇಲ್‌ ದರದಲ್ಲಿ ಬುಧವಾರವೂ ಏರಿಕೆ ಕಂಡಿದ್ದು, ಪೆಟ್ರೋಲ್ ಹಾಗೂ ಡಿಸೇಲ್‌ ಪ್ರತೀ ಲೀಟರ್‌ ಬೆಲೆ 25 ಪೈಸೆ ಏರಿಕೆಯಾಗಿದೆ.

- Advertisement -


ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದ್ದು ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಹಾಗೆಯೇ ಮೇ 4ರ ನಂತರ 7ನೇ ಬಾರಿ ಏರಿಕೆ ಮಾಡಿದಂತಾಗಿದೆ.ಪೆಟ್ರೋಲ್‌ ಹಾಗೂ ಡಿಸೇಲ್‌ ದರದಲ್ಲಿ ಮಂಗಳವಾರವೂ ಏರಿಕೆಯಾಗಿದ್ದು ಪೆಟ್ರೋಲ್ ಪ್ರತೀ ಲೀಟರ್‌ ಬೆಲೆ 25 ರಿಂದ 27 ಪೈಸೆ ಹಾಗೂ ಪ್ರತೀ ಲೀಟರ್‌‌ ಡಿಸೇಲ್‌ ದರ 33 ಪೈಸೆಗೆ ಏರಿಕೆಯಾಗಿತ್ತು.


ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 92.05ರೂ.ಗೆ ಏರಿಕೆಯಾದರೆ, ಡೀಸೆಲ್ ಬೆಲೆ 82.61ರೂ.ಗೆ ಏರಿದೆ. ಮುಂಬೈನಲ್ಲಿ ಪೆಟ್ರೋಲ್ 98.36 ರೂ. ಹಾಗೂ ಡೀಸೆಲ್ ಬೆಲೆ 89.75 ರೂ.ಗೆ ಏರಿಕೆಯಾಗಿದೆ.
ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 95.11 ರೂ. ಹಾಗೂ ಡಿಸೇಲ್‌ ಬೆಲೆ 95.11 ರೂ ಇದೆ.



Join Whatsapp