ಹೈದರಾಬಾದ್ ಪೋಲೀಸ್ ಅಕಾಡೆಮಿ ಕೇಂದ್ರ ಸಭಾಂಗಣಕ್ಕೆ ದಿವಂಗತ ಮಧುಕರ್ ಶೆಟ್ಟಿ ಹೆಸರು

Prasthutha|

ಹೈದರಾಬಾದ್: ಹೈದರಾಬಾದ್ ನಲ್ಲಿರುವ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೋಲೀಸ್ ಅಕಾಡೆಮಿ ಕೇಂದ್ರ ಸಭಾಂಗಣಕ್ಕೆ ಉಡುಪಿಯ ವಡ್ಡರ್ಸೆ ಮೂಲದ ಐಪಿಎಸ್ ಅಧಿಕಾರಿ ದಿವಂಗತ ಕೆ. ಮಧುಕರ್ ಶೆಟ್ಟಿ ಹೆಸರನ್ನಿಡಲಾಗಿದೆ ಎಂದು ಪೋಲೀಸ್ ಅಕಾಡೆಮಿ ಕೇಂದ್ರ ಅಧಿಕೃತ ಪ್ರಕಟಣೆ ಹೊರಡಿಸಿದೆ.

- Advertisement -

1999ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ, ಪ್ರಾಮಾಣಿಕತೆ, ದಕ್ಷತೆಗೆ ಹೆಸರಾಗಿದ್ದರು.

ಎಚ್1ಎನ್1 ನಿಂದ ಬಳಲುತ್ತಿದ್ದ ಅವರು 2018 ಡಿಸೆಂಬರ್ ನಲ್ಲಿ ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ 2018 ಡಿಸೆಂಬರ್ 28ಕ್ಕೆ ಇಹಕೋಕ ತ್ಯಜಿಸಿದ್ದರು.

- Advertisement -

ಮಧುಕರ್ ಶೆಟ್ಟಿ ಅವರ ಕೆಲಸದಲ್ಲಿನ ಬದ್ದತೆ, ದಕ್ಷತೆ ಎಲ್ಲರಿಗೆ ಮಾದರಿಯಾಗಿತ್ತು ಈ ಕುರಿತು ಗೌರವಿಸಲಿಕ್ಕಾಗಿ ಮುಖ್ಯ ಸಭಾಂಗಣಕ್ಕೆ ಅವರ ಹೆಸರನ್ನಿಡಲು ತೀರ್ಮಾನಿಸಲಾಗಿದೆ ಎಂದು ಪೋಲೀಸ್ ಅಕಾಡೆಮಿ ಕೇಂದ್ರದ ಉಪನಿರ್ದೇಶಕ ಕೆಪಿಎಂ ಇಲಿಯಾಸ್ ಹೇಳಿದ್ದಾರೆ.

Join Whatsapp