ವಾಷಿಂಗ್ಟನ್ : ಅಮೇರಿಕಾ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಏಜೆಂಟರು ವಾಷಿಂಗ್ಟನ್ ಡಿಸಿಯ ಉಪನಗರದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಭಾರತಿಯ ಪ್ರಯಾಣಿನ ಲಗೇಜ್ ಬ್ಯಾಗ್ ನಲ್ಲಿ ಹಸುವಿನ ಸಗಣಿ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಸುವಿನ ಸಗಣಿಯನ್ನು ಯುಎಸ್ ನಲ್ಲಿ ನಿಷೇಧಿಸಲಾಗಿದೆ ಯಾಕೆಂದರೆ ಅವುಗಳು ಹೆಚ್ಚು ಸಾಂಕ್ರಾಮಿಕ ರೋಗ ಅಥವಾ ಕಾಲುಬಾಯಿರೋಗದ ಸಂಭಾವ್ಯ ವಾಹಕಗಳಾಗಿವೆ.
ಏರ್ ಇಂಡಿಯಾ ವಿಮಾನದ ಪ್ರಯಾಣಿಕ ಸಿಬಿಪಿಯ ತಪಾಸಣೆ ಕೇಂದ್ರಕ್ಕೆ ತಲುಪಿದ ನಂತರ ಸಿಬಿಪಿ ಕೃಷಿ ತಜ್ಞರು ಸೂಟ್ ಕೇಸ್ ನಲ್ಲಿ ಎರಡು ಹಸುವಿನ ಸಗಣಿ ಉಂಡೆಯನ್ನುಪತ್ತೆಮಾಡಿದ್ದಾರೆ” ಎಂದು ಮಾಧ್ಯಮ ಪ್ರಕಟಣೆ ಸೋಮವಾರ ತಿಳಿಸಿದೆ.
ಕಾಲುಬಾಯಿ ರೋಗವು ಜಾನುವಾರು ಮಾಲೀಕರು ಹೆಚ್ಚು ಭಯಪಡುವ, ಗಂಭೀರ ಕಾಯಿಲೆಗಳಲ್ಲಿ ಒಂದಾಗಿದೆ, ಮತ್ತು ಇದು ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣೆಯ ಕೃಷಿ ಸಂರಕ್ಷಣಾ ಕಾರ್ಯಾಚರಣೆಯ ಮಹತ್ವದ ಕಾರ್ಯಾಚರಣೆಯಾಗಿದೆ. ಎಂದು ಬಾಲ್ಟಿಮೋರ್ ಫೀಲ್ಡ್ ಆಫೀಸ್. ಸಿಬಿಪಿಯ ಕ್ಷೇತ್ರ ಕಾರ್ಯಾಚರಣೆಗಳ ನಿರ್ದೇಶಕ ಕೀತ್ ಫ್ಲೆಮಿಂಗ್ ಹೇಳಿದರು.
ಯು.ಎಸ್. ಕೃಷಿ ಇಲಾಖೆಯ ಪ್ರಕಾರ, ಕಾಲುಬಾಯಿ ರೋಗವು ವಿಶ್ವಾದ್ಯಂತದ ಜಾನುವಾರುಗಳಿಗೆ ತೊಂದರೆ ತರುವ ರೋಗವಾಗಿದ್ದು ಇದು ವ್ಯಾಪಕವಾಗಿ ಮತ್ತು ವೇಗವಾಗಿ ಹರಡಬಹುದು ಮತ್ತು ಜಾನುವಾರುಗಳ ಸಂಖ್ಯೆಗೆ ಗಮನಾರ್ಹ ನಷ್ಟವನ್ನು ತರಬಲ್ಲದು. 1929ರಿಂದ ಯುಎಸ್ ಕಾಲುಬಾಯಿ ರೋಗದಿಂದ ಮುಕ್ತವಾಗಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.