ಕುವೈತ್ ನಿಂದ ಮಂಗಳೂರಿಗೆ ಆಗಮಿಸಿದ 40 ಮೆಟ್ರಿಕ್ ಟನ್ ಆಕ್ಸಿಜನ್

Prasthutha|

ಮಂಗಳೂರು : ಕುವೈತ್ ನಿಂದ ‘ಐ‌.ಎನ್.ಎಸ್. ಕೊಲ್ಕತ್ತಾ’ ಯುದ್ದ ನೌಕೆ ಮೂಲಕ ನವ ಮಂಗಳೂರು ಬಂದರಿಗೆ ಆಕ್ಸಿಜನ್ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಬರಮಾಡಿಕೊಂಡಿದ್ದಾರೆ.

- Advertisement -

‘ಐ‌.ಎನ್.ಎಸ್. ಕೊಲ್ಕತ್ತಾ’ ಯುದ್ದ ನೌಕೆ ಮೂಲಕ ಆಗಮಿಸಿದ ISO ಟ್ಯಾಂಕ್ ನಲ್ಲಿ 40 ಮೆಟ್ರಿಕ್ ಟನ್ ಆಕ್ಸಿಜನ್ ಜೊತೆಗೆ 5 ಟನ್ ಆಕ್ಸಿಜನ್ ಸಿಲಿಂಡರ್ ಮತ್ತು 4 ಹೈ ಫ್ಲೋ ಆಕ್ಸಿಜನ್ ಕಂಟೈನರ್ ಆಗಮಿಸಿಸಿದೆ.

ಇತ್ತೀಚೆಗೆ ಬಹ್ರೈನ್ ದೇಶದ ಕೊಡುಗೆಯಾಗಿ 40 ಮೆಟ್ರಿಕ್ ಟನ್ ಆಕ್ಸಿಜನ್ ಮಂಗಳೂರು ಬಂದರಿಗೆ ಆಗಮಿಸಿತ್ತು. ಅದರಲ್ಲಿ 20 ಮೆಟ್ರಿಕ್ ಟನ್ ಆಕ್ಸಿಜನ್ ಬೆಂಗಳೂರಿಗೆ ಕಳುಹಿಸಿದರೆ, ಉಳಿದ 20 ಮೆಟ್ರಿಕ್ ಟನ್ ಆಕ್ಸಿಜನ್ ನಲ್ಲಿ ಉಡುಪಿ ಮತ್ತು ಮಂಗಳೂರಿಗೆ ತಲಾ 10 ಮೆಟ್ರಿಕ್ ಟನ್ ನಂತೆ ವಿಂಗಡಿಸಲಾಗಿತ್ತು.



Join Whatsapp