ಫಿತ್ರ್ ಝಕಾತ್ | ದ.ಕ. ಜಿಲ್ಲಾ ಖಾಝಿ ತ್ವಾಖಾ ಉಸ್ತಾದರಿಂದ ಮಾರ್ಗಸೂಚಿ ಪ್ರಕಟ

Prasthutha|

ಮಂಗಳೂರು : ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ, ಈ ಹಿನ್ನೆಲೆಯಲ್ಲಿ ಈ ಬಾರಿಯ ಫಿತ್ರ್ ಝಕಾತ್ ಪಡೆಯಲು ಹಾಗೂ ನೀಡಲು ತೊಡಕಾಗುವ ಸಾಧ್ಯತೆ ಇದ್ದು , ಫಿತ್ರ್ ಝಕಾತನ್ನು ಯಾವ ರೀತಿಯಲ್ಲಿ ನಿರ್ವಹಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ಶೈಖುನಾ ತ್ವಾಖಾ ಅಹ್ಮದ್ ರವರು ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ. ಮಾರ್ಗಸೂಚಿಗಳು ಕೆಳಗಿನಂತಿವೆ .

  1. ಫಿತ್ರ್ ಝಕಾತನ್ನು ರಮಝಾನ್ ತಿಂಗಳ ಪ್ರಾರಂಭದಿಂದಲೇ ನೀಡಬಹುದು , ಆದರೆ ಪಡೆದ ವ್ಯಕ್ತಿ ಈದುಲ್ ಫಿತ್ರ್ ದಿನದ ವರೆಗೆ ಜೀವಂತವಿದಲ್ಲಿ ಮಾತ್ರವೇ ಫಿತ್ರ್ ಝಕಾತ್ ಎಂದು ಪರಿಗಣಿಸಲ್ಪಡುವುದು.
  2. ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಫಿತ್ರ್ ಝಕಾತ್ ಸಾಮಾಗ್ರಿಗಳನ್ನು ಶರೀಅತ್ ವಿರುಧ್ದವಾಗದಂತೆ ಆಯಾ ಜಮಾಅತ್ ಸಮಿತಿಗಳು ಮನೆಮನೆಗೆ ತಲುಪಿಸುವ ಯೋಜನೆ ರೂಪಿಸಬಹುದು.
  3. ಇವೆಲ್ಲವೂ ಸಾಧ್ಯವಾಗದಿದ್ದರೆ , ಫಿತ್ರ್ ಝಕಾತನ್ನು ಅದರ ಸಮಯಕ್ಕೆ ಮನೆಗೆ ಜನರು ಬಂದರೆ ನೀಡುವೆನು ಎಂಬ ನಿಯ್ಯತಿನೊಂದಿಗೆ ಪ್ರತ್ಯೇಕವಾಗಿ ಇರಿಸಬಹುದು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಿದ್ದಾರೆ.
Join Whatsapp