ಲಂಡನ್ ಮೇಯರ್ ಆಗಿ ಸಾದಿಕ್ ಖಾನ್ ಮರು ಆಯ್ಕೆ

Prasthutha|

ಲಂಡನ್: ಲೇಬರ್ ಪಕ್ಷದ ಅಭ್ಯರ್ಥಿ ಸಾದಿಕ್ ಖಾನ್ ಅವರು ಲಂಡನ್ ಮೇಯರ್ ಆಗಿ ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ.

- Advertisement -

ಚುನಾವಣೆಯಲ್ಲಿ ಸಾದಿಕ್ ಖಾನ್ ಅವರು 12,06,034 ಮತಗಳಿಸಿ 9,77,601 ಮತ ಪಡೆದ ಪ್ರತಿಸ್ಪರ್ಧಿ ಕನ್ಸರ್ವೇಟಿವ್ ಪಕ್ಷದ ಶೌನ್ ಬೈಲೆ ವಿರುದ್ಧ ಜಯಶಾಲಿಯಾಗಿದ್ದಾರೆ.  ಸಾದಿಕ್ ಖಾನ್ ಒಟ್ಟಾರೆ ಶೇ 55.2 ಮತಗಳಿಸಿದ್ದರೆ, ಬೈಲೆ ಶೇ 44.8ರಷ್ಟು ಮತಗಳಿಗೆ ತೃಪ್ತಿ ಪಟ್ಟಿದ್ದಾರೆ.

2016ರಲ್ಲಿ ಸಾದಿಕ್ ಖಾನ್ ಲಂಡನ್ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಆ ಹುದ್ದೆಗೆ ಆಯ್ಕೆಯಾದ ಮೊದಲ ಮುಸ್ಲಿಮ್ ಮುಖಂಡ ಎನಿಸಿಕೊಂಡಿದ್ದರು. ಕಳೆದ ವರ್ಷವೇ ನಡೆಯಬೇಕಿದ್ದ ಮೇಯರ್ ಮತದಾನವು ಕೋವಿಡ್ ಸೋಂಕಿನ ಕಾರಣಕ್ಕಾಗಿ ಮುಂದೂಡಲಾಗಿತ್ತು.

- Advertisement -

‘ಸಾಂಕ್ರಾಮಿಕ ರೋಗದ ಕರಾಳ ದಿನಗಳು ಮುಗಿಯುತ್ತಿದ್ದಂತೆ ಲಂಡನ್‌ ನಗರದ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತೇನೆ. ಇಲ್ಲಿನ ನಾಗರಿಕರಿಗೆ ಹಸಿರು ಮತ್ತು ಸುರಕ್ಷಿತ ನಗರವನ್ನು ರಚಿಸಲು ಶ್ರಮಿಸುತ್ತೇನೆ. ಲಂಡನ್ ಜನತೆಯ ಅಗತ್ಯತೆಗಳನ್ನು ಪೂರೈಸಲು ಬದ್ಧನಾಗಿರುವೆ’ ಎಂದು ತನ್ನ ಆಯ್ಕೆಯ ಬಳಿಕ ಸಿಟಿಹಾಲ್ ಕಚೇರಿಯಲ್ಲಿ ಸಾದಿಕ್ ಖಾನ್ ಹೇಳಿದ್ದಾರೆ.



Join Whatsapp