ಕ್ಷಮೆ ಕೇಳಿದ ಸುದ್ದಿ ಸುಳ್ಳು ಎಂದ ತೇಜಸ್ವಿಗೆ Newsminute ಸಂಪಾದಕಿ ತಿರುಗೇಟು

Prasthutha|

► “ನಮ್ಮ ಬಳಿ ಸಾಕ್ಷ್ಯ ಇದೆ”

- Advertisement -

ಬೆಂಗಳೂರು : ಬಿಬಿಎಂಪಿಯ ದಕ್ಷಿಣ ವಲಯದ ವಾರ್ ರೂಮ್ ನಲ್ಲಿ ನಡೆದ ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲು ಯತ್ನಿಸಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಗ್ಗೆ ತಾನು ಕ್ಷಮೆಯಾಚಿಸಿರುವ ಬಗ್ಗೆ ಪ್ರಸಾರವಾಗುತ್ತಿರುವ ಸುದ್ದಿಯನ್ನು ನಿರಾಕರಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ Thenewsminute.com ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ತಿರುಗೇಟು ನೀಡಿದ್ದು, ನಮ್ಮ ಬಳಿ ದಾಖಲೆಗಳಿವೆ ಇದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ವಾರ್ ರೂಂಗೆ ತೆರಳಿ ಕ್ಷಮೆ ಯಾಚಿಸಿರುವ ಬಗ್ಗೆ Thenewsminute.com ವರದಿ ಮಾಡಿತ್ತು. ಇದನ್ನು ನಿರಾಕರಿಸಿದ ಸಂಸದ ‘ಇದು ಸುಳ್ಳು ಸುದ್ದಿ’ ಎಂದು ಟ್ವೀಟ್ ಮಾಡಿದ್ದರು.

- Advertisement -

ಇದರ ಬೆನ್ನಿಗೇ Thenewsminute.com ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ಟ್ವೀಟ್ ಮಾಡಿ, ”ಯಾವುದು ಸುಳ್ಳು ಸುದ್ದಿ? ನೀವು ಅಲ್ಲಿಗೆ ಹೋಗಿದ್ದೀರಿ. ನಂಬರ್ ಗಳು ಸೋರಿಕೆಯಾದ ಬಗ್ಗೆ ಹಾಗೂ ಕಿರುಕುಳ ನೀಡಿರುವ ಬಗ್ಗೆ ನೀವು ಕ್ಷಮಿಸಿ ಎಂದಿದ್ದೀರಿ. ತನಗೆ ನೀಡಲಾದ ಪಟ್ಟಿಯನ್ನು ಓದಿರುವುದಾಗಿ ನೀವು ತಿಳಿಸಿದ್ದೀರಿ. ಮುಸ್ಲಿಮರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂಬುದನ್ನೂ ಹೇಳಿದ್ದೀರಿ. ನನ್ನ ಬಳಿ ಆಡಿಯೋ ಇದೆ” ಎಂದು ತಿರುಗೇಟು ನೀಡಿದ್ದಾರೆ.



Join Whatsapp