ಬೆಂಗಳೂರು : ನಗರದಲ್ಲಿ ಕೊರೋನಾ ತೀವ್ರತೆ ಹೆಚ್ಚಾಗಿದ್ದು, ಪರಿಸ್ಥಿತಿ ನಿಯಂತ್ರಣ ಕಳೆದುಕೊಂಡಿದೆ. ಈ ನಡುವೆ ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಮತ್ತೆ ಕೊರೋನಾ ಶಾಕ್ ನೀಡಿದ್ದು, ನಗರದಲ್ಲಿ 24 ಘಂಟೆಯಲ್ಲಿ 68 ಪೊಲೀಸ್ ಸಿಬ್ಬಂದಿಗಳಿಗೆ ಹೊಸದಾಗಿ ಕೋವಿಡ್ ದೃಢಪಟ್ಟಿದೆ.
ಈ ಮೂಲಕ ಕೊರೋನಾ ಸೋಂಕಿತ ಪೊಲೀಸರ ಸಂಖ್ಯೆ 1014ಕ್ಕೆ ಏರಿಕೆಯಾಗಿದ್ದು, ಇವರಲ್ಲಿ 752 ಪೊಲೀಸರು ಹೋಂ ಐಸೋಲೇಷನ್ ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂದಹಾಗೇ ಇದುವರೆಗೆ 209 ಕೊರೋನಾ ಸೋಂಕಿತರಾದ ಪೊಲೀಸರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಿವಿಧ ಆಸ್ಪತ್ರೆಗಳ ಜನರಲ್ ವಾರ್ಡ್ ನಲ್ಲಿ 40 ಸಿಬ್ಬಂದಿ, ಐಸಿಯು ಮತ್ತು ಆಕ್ಸಿಜನ್ ವಾರ್ಡ್ ಗಳಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಕೊರೋನಾ ಸೋಂಕಿನಿಂದಾಗಿ 11 ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿರುವಂತ 68 ಪೊಲೀಸ್ ಸಿಬ್ಬಂದಿಗಳಲ್ಲಿ 14 ಮಂದಿ ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದವರಾಗಿದ್ದು, 47 ಸಿಬ್ಬಂದಿಗಳು 2ನೇ ಡೋಸ್ ಪಡೆದವರಾಗಿದ್ದಾರೆ. 7 ಪೊಲೀಸರು ಇದುವರೆಗೆ ಲಸಿಕೆ ಪಡೆಯದವರಾಗಿದ್ದಾರೆ.