ಕೋವಿಡ್ ಬಿಕ್ಕಟ್ಟು | ಮಧ್ಯಪ್ರದೇಶ ಜೈಲಿನ 4,500 ಕೈದಿಗಳಿಗೆ ಪರೋಲ್

Prasthutha|

ಭೋಪಾಲ್ : ದೇಶದಲ್ಲಿ ಕೋವಿಡ್ ಸೋಂಕಿನ ತೀವ್ರತೆಯಿಂದ ಜನತೆ ಕಂಗಾಲಾಗಿದ್ದು, ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸುಮಾರು 4,500 ಕೈದಿಗಳನ್ನು ಪರೋಲ್​ ಮೇಲೆ ಬಿಡುಗಡೆ ಮಾಡಲು ಮಧ್ಯಪ್ರದೇಶ ಸರ್ಕಾರ ಆದೇಶಿಸಿದೆ.

- Advertisement -

 ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ನರೋತ್ತಮ್ ಮಿಶ್ರಾ, ಕೊರೋನಾ ಅಟ್ಟಹಾಸ ಮಿತಿಮೀರಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ 4,500 ಕೈದಿಗಳನ್ನು ಪರೋಲ್ ಮೇಲೆ ಕಳುಹಿಸಲು ನಿರ್ಧರಿಸಿದೆ’ ಎಂದು ಹೇಳಿದ್ದಾರೆ.

‘ಜೈಲುಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿರುವುದರಿಂದ ಜೈಲಿನಲ್ಲಿರುವ ಕೈದಿಗಳಿಗೆ ಪೆರೋಲ್ ನೀಡಲು ಸರ್ಕಾರ ನಿರ್ಧರಿಸಿದೆ. ಅತ್ಯಾಚಾರ, ಕೊಲೆ ಮತ್ತು ಇತರ ಘೋರ ಪ್ರಕರಣಗಳಿಗೆ ಜೈಲುವಾಸ ಅನುಭವಿಸಿದವರಿಗೆ ಪರೋಲ್​ ನೀಡಲಾಗಿಲ್ಲ’ ಎಂದು ಮಿಶ್ರಾ ಹೇಳಿದ್ದಾರೆ.



Join Whatsapp