IPLಗೂ ವಕ್ಕರಿಸಿದ ಕೋವಿಡ್ | ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಇಂದಿನ ಪಂದ್ಯ ರದ್ದು !

Prasthutha|

ಕೋಲ್ಕತ್ತಾ ನೈಟ್ ರೈಡರ್ಸ್ ನ ಕೆಲ ಆಟಗಾರರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರಿಂದಾಗಿ ಇಂದು ರಾತ್ರಿ ನಡೆಯಬೇಕಾಗಿದ್ದ ಕೆಕೆಆರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯಾಟ ರದ್ದುಗೊಂಡಿದೆ. ಮುಂದೂಡಲಾಗಿರುವ ಇಂದಿನ ಪಂದ್ಯದ ಹೊಸ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.

ಕೆಕೆಆರ್ ನ ಆಟಗಾರರಾಗಿರುವ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಎನ್ನಲಾಗಿದೆ. ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಐಪಿಎಲ್ ಪಂದ್ಯಾಟಗಳನ್ನು ರದ್ದುಪಡಿಸಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿರುವ ಸಮಯದಲ್ಲೇ ಖುದ್ದು ಆಟಗಾರರಿಗೆ ಪಾಸಿಟಿವ್ ವರದಿಯಾಗಿರುವುದು ಐಪಿಎಲ್ ಕುರಿತು ಅನಿಶ್ಚಿತತೆ ಏರ್ಪಟ್ಟಿದೆ.

- Advertisement -