‘ಆಮ್ಲಜನಕದ ಕೊರತೆಯಿಂದ ಅಲ್ಲ, ಫೋನ್‌ನಿಂದ ಸೋಂಕಿತರು ಸಾಯುತ್ತಿದ್ದಾರೆ’: ಬಿಜೆಪಿ ಶಾಸಕ

Prasthutha|

ಕೊಪ್ಪಳ : ರಾಜ್ಯಾದ್ಯಂತ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್ ಗಳ ಕೊರತೆಯಿಂದ ಸೋಕಿತರು ಸಾವನ್ನಪ್ಪುತ್ತಿದ್ದಾರೆ. ಈ ನಡುವೆ ಕೊಪ್ಪಳ ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ್ ದಢೇಸುಗೂರ ಅವರು, ಬೆಡ್ ಸಿಗದೆ ಆಕ್ಸಿಜನ್ ಸಿಗದೇ ಸೋಂಕಿತರು ಸಾಯುತ್ತಿಲ್ಲ ಬದಲಾಗಿ ಸ್ಮಾರ್ಟ್​ಫೋನ್​ ನೋಡಿ ಭಯದಿಂದಲೇ ಜನರು ಸಾಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

- Advertisement -

ಗಂಗಾವತಿಯ ಕೋವಿಡ್19 ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಮಾತನಾಡುವ ವೇಳೆ ಶಾಸಕರು ಈ ರೀತಿ ಹೇಳಿಕೆ ನೀಡಿದ್ದಾರೆ. ಬೆಡ್ ಸಿಗದೆ, ಆಕ್ಸಿಜನ್ ಸಿಗದೇ ಸೋಂಕಿತರು ಸಾಯುತ್ತಿಲ್ಲ, ಸ್ಮಾರ್ಟ್​ಫೋನ್​ ನೋಡಿ ಭಯದಿಂದಲೇ ಜನರು ಸಾಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ ಸ್ಮಾರ್ಟ್​ಫೋನ್ ನೀಡಬೇಡಿ ಎಂದು ಬಿಜೆಪಿ ಶಾಸಕ ಬಸವರಾಜ್ ವೈದ್ಯರಿಗೆ ಮನವಿ ಮಾಡಿದ್ದಾರೆ.

ಚಿಕಿತ್ಸೆಯಲ್ಲಿರುವ ಕೋವಿಡ್ ಪೀಡಿತರಿಗೆ ಸ್ಮಾರ್ಟ್ ಫೋನ್ ಬಳಕೆ ನಿಷೇಧಿಸಿದರೆ ರೋಗಿಗಳು ಗುಣಮುಖರಾಗಲು ಸಾಧ್ಯ. ಕೋವಿಡ್ ಸಂಬಂಧಿತ ಸುದ್ದಿಗಳು  ಸ್ಮಾರ್ಟ್ ‌ಫೋನ್ ನಲ್ಲಿ ನೋಡಿದ ರೋಗಿಗಳು ಆತಂಕಕ್ಕೆ ಒಳಗಾಗುತ್ತಾರೆ. ಹೀಗಾಗಿ ಭಯದಿಂದ ಮೃತಪಡುತ್ತಿದ್ದಾರೆ ಎಂದಿದ್ದಾರೆ. ರೋಗಿಗಳು ಮನೆಯವರೊಂದಿಗೆ ಮಾತನಾಡಲು ಬೇಸಿಕ್​ ಮೊಬೈಲನ್ನೇ ಕೊಡಿ. ಸ್ಮಾರ್ಟ್​ಫೋನ್ ನೋಡಿ ಭಯದಿಂದ ಜನರು ಸಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.



Join Whatsapp