ದೆಹಲಿಯಲ್ಲಿ ಪಾರ್ಕ್, ವಾಹನ ನಿಲುಗಡೆ ಪ್ರದೇಶ, ಖಾಲಿ ಮೈದಾನಗಳಲ್ಲಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ!

Prasthutha|

ಹೊಸದಿಲ್ಲಿ : ದೇಶದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿರುವುದರಿಂದ ಹಲವಾರು ಜೀವಗಳು ಬಲಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪಾರ್ಕ್, ವಾಹನ ನಿಲುಗಡೆ ಪ್ರದೇಶಗಳಲ್ಲಿ ಮತ್ತು ಖಾಲಿ ಮೈದಾನಗಳಲ್ಲಿ ಕೊರೋನಾ ಪೀಡಿತರ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

- Advertisement -

ದೆಹಲಿಯಲ್ಲಿ ಮೂರು ನಗರಪಾಲಿಕೆಗಳು ಈಗ ಹೆಚ್ಚಿನ ಸ್ಥಳಾವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ನಗರದಲ್ಲಿ ಮೃತದೇಹ ಸಂಸ್ಕರಿಸುವ ಸ್ಥಳಗಳಲ್ಲಿ ರಾತ್ರಿ ಮತ್ತು ಹಗಲೂ ಕೊರೋನಾ ಸೋಂಕಿತರ ಮೃತದೇಹ ಸಂಸ್ಕಾರ ಮಾಡಲಾಗುತ್ತಿರುವುದರಿಂದ ಸ್ಥಳದ ಅಭಾವ ಕಂಡುಬಂದಿದೆ ಎನ್ನಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ದೆಹಲಿಯ ಈಶಾನ್ಯ ಮೇಯರ್ ನಿರ್ಮಲ್ ಜೈನ್, ಅಂತ್ಯಸಂಸ್ಕಾರ ನಡೆಸಲು ಬೇಕಾದಷ್ಟು ಸ್ಥಳಗಳ ಹುಡುಕಾಟ ನಡೆಸುತ್ತಿದ್ದೇವೆ. ದೆಹಲಿಯ ಇನ್ನೊಂದು ಪ್ರಮುಖ ಸ್ಥಳ ಪಂಜಾಬಿ ಭಾಗ್‌ನ್ನು ಕೊರೋನಾ ಸೋಂಕಿತರ ಅಂತ್ಯಸಂಸ್ಕಾರಕ್ಕಾಗಿ ಮಾತ್ರ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಕೊರೋನಾ ಸಾವಿನ ಸಂಖ್ಯೆ ಹೆಚ್ಚಾಗಿರುವುದರಿಂದ ಅಂತ್ಯಸಂಸ್ಕಾರ ನಡೆಸಲು ಹೆಚ್ಚಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.



Join Whatsapp