ಕೋವಿಡ್ ಹಿನ್ನೆಲೆ | ವಿಜಯೋತ್ಸವ ನಿಷೇಧಿಸಿದ ಚುನಾವಣಾ ಅಯೋಗ

Prasthutha|

ಹೊಸದಿಲ್ಲಿ : ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣದಲ್ಲಿ ಗಂಭೀರ ಪ್ರಮಾಣದ ಹೆಚ್ಚಳ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಕರ್ನಾಟಕ ಸರಕಾರ 14 ದಿನಗಳ ಲಾಕ್ ಡೌನ್ ಘೋಷಿಸಿದ್ದು ಮತ್ತು ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಹಾಗೂ ಬಿಗಿ ನಿಯಮಾವಳಿಗಳನ್ನು ಹೇರಲಾಗಿದೆ. ಇದೀಗ ಮೇ 2 ರಂದು ಪ್ರಕಟವಾಗುವ ಐದು ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶ ಪ್ರಕಟವಾಗುವ ವೇಳೆ ವಿಜಯೋತ್ಸವ ನಡೆಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ ಎಂದು ತಿಳಿದು ಬಂದಿದೆ.

- Advertisement -

ಮೇ 2ರಂದು ಮತ ಎಣಿಕೆ ನಡೆದ ಬಳಿಕ ಯಾವುದೇ ವಿಜಯೋತ್ಸವ ರ‍್ಯಾಲಿ,ಸಮಾವೇಶ ಹಾಗೂ ಜನರು ಸೇರದೇ ಇರುವಂತೆ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ ಎಂದು ndtv ವರದಿ ಮಾಡಿದೆ

Join Whatsapp