ರಾಜ್ಯ ಸರ್ಕಾರದ ಹೊಸ ಕೋವಿಡ್ ಗೈಡ್‌ಲೈನ್ಸ್ | ದಕ ಜಿಲ್ಲಾಧಿಕಾರಿ ಮತ್ತು ಕಮಿಷನರ್‌ರಿಂದ ಜಂಟಿ ಪತ್ರಿಕಾಗೋಷ್ಠಿ

Prasthutha|

►ಮಾರ್ಗಸೂಚಿ ಬಗ್ಗೆ ಸಂಪೂರ್ಣ ಮಾಹಿತಿ

- Advertisement -

ಮಂಗಳೂರು :  ರಾಜ್ಯ ಸರ್ಕಾರದ ಹೊಸ ಕೋವಿಡ್ ಗೈಡ್ ಲೈನ್ಸ್ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತು ಕಮಿಷನರ್ ಶಶಿಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಮಾರ್ಗಸೂಚಿ ಪ್ರಕಾರ ವೀಕೆಂಡ್ ಕರ್ಫ್ಯೂ ಸಮಯದಲ್ಲಿ ನಿಗದಿಯಾಗಿದ್ದ ಮದುವೆ ನಡೆಸಲು ಅನುಮತಿ ಇದ್ದು, ಕೇವಲ 50 ಜನರು ಮಾತ್ರ ಮದುವೆಯಲ್ಲಿ ಭಾಗವಹಿಸಲು ಅವಕಾಶವಿದೆ. ಇದಕ್ಕಾಗಿ ಮದುವೆ ಮನೆಯವರು 50 ಜನರ ಪಟ್ಟಿ ತಯಾರಿಸಬೇಕು. ಆ ಪಟ್ಟಿಯನ್ನು ಸ್ಥಳೀಯಾಡಳಿತಕ್ಕೆ ತೋರಿಸಿ ಅನುಮತಿ ಪಡೆಯಬೇಕು.

- Advertisement -

ಆ ಬಳಿಕ ಆ 50 ಜನರ ಅನುಮತಿ ಪಡೆದ ಪತ್ರ ಮತ್ತು ಮದುವೆ ಆಮಂತ್ರಣ ಪತ್ರಿಕೆ ಹಾಗೂ ಮದುವೆಗೆ ಹೋಗುವವರ ಐಡಿ ಕಾರ್ಡ್ ಕಡ್ಡಾಯವಾಗಿದ್ದು, ಈ ಮೂರು ದಾಖಲೆಗಳನ್ನು ವಾಟ್ಸ್ ಅಪ್ ನಲ್ಲಿ ಪೊಲೀಸರಿಗೆ ತೋರಿಸಿ ಪ್ರಯಾಣಿಸಬಹುದು.

ಆದರೆ ಮದುವೆ ಆಮಂತ್ರಣ ಪತ್ರಿಕೆಯ ನೈಜ ಪ್ರತಿ ಪ್ರಯಾಣದ ವೇಳೆ ಕೈಯ್ಯಲ್ಲಿರಲೇಬೇಕು. ಮದುವೆಗೆ ಗೆಸ್ಟ್ ಲಿಸ್ಟ್ ನಲ್ಲಿರುವವರ ಐಡಿ ತೋರಿಸಿದರಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಇನ್ನು ಮದುವೆಗೆ ಹೋಗುವ ಕಾರಿನಲ್ಲಿ ಏಳೆಂಟು ಜನರನ್ನು ತುಂಬಿದ್ರೆ ಪ್ರಯಾಣಿಸಲು ಅವಕಾಶ ಇಲ್ಲ. ಅದೇ ರೀತಿ ದೇವಸ್ಥಾನದಲ್ಲಿ ಮದುವೆ ನಡೆಯುವುದಾದರೆ 50 ಜನರನ್ನು ಸೇರಿಸಿ ಮಾಡಬಹುದು. ಮದುವೆ ಫೋಟೋಗ್ರಾಫರ್ಸ್, ಅರ್ಚಕರು ಎಲ್ಲರೂ 50 ಜನರ ಲಿಸ್ಟ್ ನಲ್ಲೇ ಬರುತ್ತಾರೆ.

ದೇವಸ್ಥಾನದ ಧಾರ್ಮಿಕ ಕಾರ್ಯಗಳನ್ನು ನಡೆಸಲು ಅರ್ಚಕರಿಗೆ ಮಾತ್ರ ಅವಕಾಶವಿದ್ದು, ಯಾವುದೇ ಸಾರ್ವಜನಿಕರು ಈ ಆಚರಣೆಯಲ್ಲಿ ಭಾಗಿಯಾಗಲು ನಿಷೇಧವಿದೆ. ಈ ಆದೇಶ ಇವತ್ತಿನಿಂದಲೇ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಜಾರಿಯಾಗಲಿದೆ.

ಯಾರ ಹೆಸರಿನಲ್ಲಿ ಪಾಸ್ ಮತ್ತು ಐಡಿ ಕಾರ್ಡ್ ಇದೆ, ಅವರಿಗಷ್ಟೇ ಸಂಚಾರಕ್ಕೆ ಅವಕಾಶವಿದೆ. ವೀಕೆಂಡ್ ‌ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಇದೆ. ಅಗತ್ಯ ವಸ್ತುಗಳು ಸಹಜವಾಗಿ ನಡೆದುಕೊಂಡು ಹೋಗುವ ಅಂತರದಲ್ಲೇ ಸಿಗುವುದರಿಂದ ಅವರವರ ಮನೆಯ ಅಕ್ಕಪಕ್ಕದಲ್ಲೇ ಖರೀದಿಸಬೇಕು. ವಾಹನ ಬಳಸಿ ಅಗತ್ಯ ವಸ್ತು ಖರೀದಿಗೆ ಹೋಗುವುದಾದರೂ ಅದಕ್ಕೆ ಸೂಕ್ತ ಕಾರಣ ಬೇಕು. ಅದನ್ನು ದುರುಪಯೋಗಪಡಿಸಿಕೊಂಡರೆ ಅಂಥವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು.



Join Whatsapp