ಮೈಸೂರು : ಕೋವಿಡ್ ಬಗ್ಗೆ ರಾಜ್ಯಪಾಲರು ಮೀಟಿಂಗ್ ತೆಗೆದುಕೊಳ್ಳುತ್ತಾರೆ ಅಂದರೆ ಏನರ್ಥ ? ಜನತಾ ಸರ್ಕಾರ ವಿಫಲವಾದಾಗ ರಾಜ್ಯಪಾಲರು ಮಧ್ಯಪ್ರವೇಶ ಮಾಡಬಹುದು. ಸುಮ್ಮನೆ ಯಾಕೆ ರಾಜ್ಯಪಾಲರು ಮೀಟಿಂಗ್ ಮಾಡಬೇಕು ? ಹಾಗಾದರೆ ಕೋವಿಡ್ ಹಿಮ್ಮೆಟ್ಟಿಸಲು ಸರ್ಕಾರ ವಿಫಲವಾಗಿದೆ. 2 ಸಾವಿರ ಹಾಸಿಗೆ, ಬೆಡ್, ಆಕ್ಸಿಜನ್ ತಂದ್ರಲ್ಲ ಅವು ಏನಾಯ್ತು? ಅದಕ್ಕೆ ಮಾಡಿದ ವ್ಯವಸ್ಥೆ ಏನಾಯ್ತು.? ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ವ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾದ ಎರಡನೇ ಗಾಳಿ ಬೀಸುತ್ತೆ ಅಂತ ಡಬ್ಲ್ಯೂಎಚ್‌ಒ ಹೇಳಿತ್ತು. ಕೇಂದ್ರ ಸರ್ಕಾರಕ್ಕೂ ಅದರ ಬಗ್ಗೆ ಮಾಹಿತಿ ಇತ್ತು. ನೀವು ಏನು ತಯಾರಿ ಮಾಡಿಕೊಂಡಿದ್ದೀರಿ? ಜನರಿಗೆ ಸೇವೆ ನೀಡುವುದರಲ್ಲಿ ಸರ್ಕಾರ ಸೋತಿದೆ. ಬರೀ ಮೀಟಿಂಗ್ ಮಾಡ್ತೀರ, ತೀರ್ಮಾನ ಏನಾಗಿದೆ ಹೇಳಿ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸಿಎಂ ಹಾಗೂ ಸಚಿವರು, ಡಿಸಿಎಂ ನಡುವೆ ಸಮನ್ವಯತೆ ಹೋಗಿದೆ. ಅದು ಹೋದ ಕಾರಣವೇ ಈ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಐಎಸ್‌ಎಸ್ ಅಧಿಕಾರಿಗಳು ಯಾವ ಮಂತ್ರಿಯ ಮಾತನ್ನೂ ಕೇಳುತ್ತಿಲ್ಲ. ಇನ್ನಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಪವರ್ ಕೊಡಬೇಕು. ನಿರ್ಧಾರ ತೆಗೆದುಕೊಳ್ಳುವ ಹಣಕಾಸು ವ್ಯವಸ್ಥೆ ಸರ್ಕಾರ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಅವರು ಸಲಹೆ ನೀಡಿದ್ದಾರೆ.