ಕುಂಭಮೇಳ ಕೊರೋನಾ ಹಾಟ್ ಸ್ಪಾಟ್ | ಎರಡು ದಿನಗಳಲ್ಲಿ 1000 ಪಾಸಿಟಿವ್ ಪ್ರಕರಣಗಳು !!

Prasthutha|

►ಮಾಸ್ಕ್, ಸಾಮಾಜಿಕ ಅಂತರ, ಕೋವಿಡ್ ಮಾರ್ಗಸೂಚಿಗಳು ಲೆಕ್ಕಕ್ಕೇ ಇಲ್ಲ !

- Advertisement -

ಹರಿದ್ವಾರ : ಇದೀಗಾಗಲೇ 10 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಸೇರಿರುವ ಕುಂಭಮೇಳ ನಡೆದ ಹರಿದ್ವಾರ ನಗರವು ಕೊರೋನಾ ಹಾಟ್ ಸ್ಪಾಟ್ ಆಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ. ಕಳೆದ ಎರಡು ದಿನಗಳಲ್ಲಿ ಬರೋಬ್ಬರಿ ಒಂದು ಸಾವಿರ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ ಎಂದು NDTV ವರದಿ ಮಾಡಿದೆ. ಸೋಮವಾರ ಹರಿದ್ವಾರದಲ್ಲಿ 408 ಪ್ರಕರಣಗಳು ಪತ್ತೆಯಾದರೆ, ನಿನ್ನೆ 594 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ನಗರದಲ್ಲಿ ಈಗ ಒಟ್ಟು 2812 ಸಕ್ರಿಯ ಪ್ರಕರಣಗಳು ಇದೆ.

 ಉತ್ತರಾಖಂಡ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1925 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 13 ರೋಗಿಗಳು ಮೃತಪಟ್ಟಿದ್ದಾರೆ. ಇದೀಗಾಗಲೇ ಹತ್ತು ಲಕ್ಷಕ್ಕೂ ಅಧಿಕ ಭಕ್ತರು ಕುಂಭಮೇಳದಲ್ಲಿ ಸೇರಿದ್ದು, ಒಂದು ತಿಂಗಳ ಕಾಲ ನಡೆಯುವ ಆಚರಣೆಯಲ್ಲಿ 40 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ. ದೇಶ ಈಗಾಗಲೇ ಕೋವಿಡ್ ಎರಡನೇ ಅಲೆಯ ಭೀತಿಯಲ್ಲಿರುವುದರಿಂದ ಕುಂಭಮೇಳದ ಜನ ಸಂಗಮ ಇಡೀ ದೇಶದ ಆತಂಕಕ್ಕೆ ಕಾರಣವಾಗಿದೆ.

- Advertisement -

ದೇಶದಲ್ಲಿ ಆಸ್ಪತ್ರೆಗಳ ಬೆಡ್ ಕೊರತೆ ಹಾಗೂ ಕೋವಿಡ್ ಲಸಿಕಾ ಕೊರತೆ ಎದುರಿಸುತ್ತಿರುವ ಸಮಯದಲ್ಲೇ ಹರಿದ್ವಾರದಲ್ಲಿ ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿರುವ ಎಲ್ಲಾ ಕೋವಿಡ್ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಿ,  ಸೋಮವಾರ ‘ಶಾಹಿ ಸ್ನಾನ’ ಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಸೇರಿದ್ದ ಭಕ್ತರು ಯಾವುದೇ ಮಾಸ್ಕ್ ಆಗಲಿ ಸಾಮಾಜಿಕ ಅಂತರವಾಗಲೀ ಕಾಯ್ದುಕೊಳ್ಳದೆ ಭಾಗವಹಿಸಿದ್ದರು ಎನ್ನುವುದು ಇಲ್ಲಿ ಗಮನಾರ್ಹ. ಮರುದಿನ ಅಂದರೆ ಮಂಗಳವಾರ ಭಾರತ ದಾಖಲೆಯ 1.60 ಲಕ್ಷ ಕೋವಿಡ್ ಪ್ರಕರಣಗಳನ್ನು ದಾಖಲಿಸಿತ್ತು.

ಮಾಸ್ಕ್, ಸಾಮಾಜಿಕ ಅಂತರಗಳಿಲ್ಲದೆ ಸೋಮವಾರ ಕುಂಭಮೇಳದಲ್ಲಿ ಸೇರಿರುವ ಭಕ್ತರು



Join Whatsapp