ರಮಝಾನ್ ಚಂದ್ರದರ್ಶನ | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಉಪವಾಸ ವ್ರತಾಚರಣೆ ಪ್ರಾರಂಭ

Prasthutha|

ಎಪ್ರಿಲ್ 12, ಮಂಗಳೂರು : ಪವಿತ್ರ ರಮಝಾನ್ ತಿಂಗಳ ಚಂದ್ರ ದರ್ಶನವಾಗಿರುವುದರಿಂದ ಎಪ್ರಿಲ್ 13 ರಿಂದ ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ  ರಮಝಾನಿನ ಪ್ರಥಮ ದಿನವಾಗಿದೆ. ರಮಝಾನಿನ ವ್ರತಾಚರಣೆ ನಾಳೆಯಿಂದ ಪ್ರಾರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಅಧಿಕೃತವಾಗಿ ತಿಳಿಸಿದ್ದಾರೆ.

- Advertisement -

ರಮಝಾನ್ ತಿಂಗಳಲ್ಲಿ ಮುಸ್ಲಿಮ್ ಧರ್ಮಾನುಯಾಯಿಗಳು 30 ದಿನಗಳ ಕಾಲ ವ್ರತಾಚರಣೆ ಕೈಗೊಳ್ಳುತ್ತಾರೆ. ಆ ತಿಂಗಳಲ್ಲಿ ಹೆಚ್ಚಿನ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ, ದಾನಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.



Join Whatsapp