ಪ್ರಿಯಾಂಕಾ ಗಾಂಧಿ ಬಹುಮತದಿಂದ ಜಯಗಳಿಸುವುದು ನಿಶ್ಚಿತ: ಸಿದ್ದರಾಮಯ್ಯ

Prasthutha|

ವಯನಾಡ್: ಪ್ರಿಯಾಂಕಾ ಗಾಂಧಿ ಅವರು ಅತ್ಯಂತ ಬಹುಮತದಿಂದ ಈ ಕ್ಷೇತ್ರದಲ್ಲಿ ಜಯಗಳಿಸುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಮ್ಮ ವಿರೋಧಿ. ಬಿಜೆಪಿ ಸೋಲಿಸಲು ಎಲ್ಲಾ ಜಾತ್ಯತೀತ ಶಕ್ತಿ ಮತ್ತು ಮೌಲ್ಯಗಳೊಂದಿಗೆ ನಾವು ಜೊತೆ ಸೇರುತ್ತೇವೆ. ಬಿಜೆಪಿ ಸೋಲಿಸಿ ದೇಶ ಉಳಿಸುವುದು ನಮ್ಮ ಮೊದಲ ಗುರಿ ಎಂದರು. ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅವರ ಸ್ಫರ್ಧೆಯ ಪರಿಣಾಮ ಏನಾಗಿರಬಹುದು ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪ್ರಿಯಾಂಕಾ ಗಾಂಧಿ ಅವರು ಅತ್ಯಂತ ಬಹುಮತದಿಂದ ಈ ಕ್ಷೇತ್ರದಲ್ಲಿ ಜಯಗಳಿಸುವುದು ಶತಸಿದ್ಧ ಎಂದರು.


ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ವಯನಾಡ್ ಲೋಕಸಭೆ ಕ್ಷೇತ್ರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಚುನಾವಣಾ ಕಣಕ್ಕಿಳಿದಿದ್ದಾರೆ.



Join Whatsapp