ಈ ಪಾನೀಯಗಳನ್ನು ಕುಡಿಯೋದ್ರಿಂದ ಹೊಟ್ಟೆಯ ಬೊಜ್ಜು ಕರಗುತ್ತಂತೆ !

Prasthutha|

ಹೊಟ್ಟೆಯ ಬೊಜ್ಜು ದೇಹದ ಆಕಾರವನ್ನು ಹಾಳುಗೆಡುವುದಲ್ಲದೇ, ಅನೇಕಾನೇಕ ಆರೋಗ್ಯ ಸಮಸ್ಯೆಗಳನ್ನು ಸ್ವಾಗತಿಸುತ್ತದೆ. ಅದಕ್ಕಾಗಿ ಹೊಟ್ಟೆ ಭಾಗದಲ್ಲಿರುವ ಬೊಜ್ಜನ್ನು ಕರಗಿಸಲು ಹೆಚ್ಚಿನ ಆದ್ಯತೆ ನೀಡಬೇಕು. ವ್ಯಾಯಾಮ, ಆಹಾರ, ಕೆಲ ಪಾನೀಯಗಳು ಬೆಲ್ಲಿ ಫ್ಯಾಟ್ ಕರಗಿಸಲು ಸಹಕಾರಿಯಾಗಿದೆ. ಅದ್ರೂಲ್ಲೂ ಕೆಲ ಪಾನೀಯಗಳು ಮ್ಯಾಜಿಕ್ ರೀತಿ ನಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಿ ಬಿಡುತ್ತದೆ.

- Advertisement -


ಹೊಟ್ಟೆಯ ಬೊಜ್ಜು ಕರಗಿಸುವ ಪಾನೀಯ
ಶುಂಠಿಯು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸುಧಾರಿತ ಜೀರ್ಣಕ್ರಿಯೆಯು ಹೊಟ್ಟೆಯುಬ್ಬರ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
ಚಿಯಾ ಬೀಜಗಳು ಮತ್ತು ಶುಂಠಿ ಎರಡೂ ಹಸಿವನ್ನು ನಿಗ್ರಹಿಸಲು ಹೆಸರುವಾಸಿಯಾದ ಪದಾರ್ಥಗಳು. ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಭಾವನೆಯನ್ನು ನಮಗೆ ನೀಡುತ್ತವೆ.
ಒಂದು ಪಾತ್ರೆಗೆ ಚಿಯಾ ಬೀಜಗಳು, ತುರಿದ ಶುಂಠಿ ಮತ್ತು ನೀರನ್ನು ಸೇರಿಸಿ, ಪದಾರ್ಥಗಳನ್ನು ಮಿಶ್ರಣ ಮಾಡಿ. ಚೀಯಾ ಬೀಜ ಜೆಲ್ ರೀತಿಯಾಗುವವರೆಗೂ ಈ ಪದಾರ್ಥಗಳನ್ನು ಹಾಗೆಯೇ ಸ್ವಲ್ಪ ಹೊತ್ತು ಬಿಡಿ. ನಂತರ ಕುಡಿಯಿರಿ.

ಗ್ರೀನ್ ಟೀ ಚಹಾವು ಕೊಬ್ಬನ್ನು ಸುಡುವ ಸಾಮಥ್ಯಕ್ಕೆ ಹೆಸರುವಾಸಿಯಾಗಿದೆ. ಇದು ಇದರ ಉತ್ಕರ್ಷಣ ನಿರೋಧಕ ಅಂಶದಿಂದಾಗಿ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.ಗ್ರೀನ್ ಟೀ ಹಸಿರು ಚಹಾವು ಆಹಾರದ ನಂತರದ ಅತ್ಯುತ್ತಮ ಪಾನೀಯವಾಗಿದ್ದು, ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ವಿವಿಧ ಪೋಷಕಾಂಶಗಳು ಮತ್ತು ಪ್ರಯೋಜನಕಾರಿ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಕ್ಯಾಟೆಚಿನ್ ಅಂಶವನ್ನು ಹೊಂದಿರುವ ಇದು ಚಯಾಪಚಯವನ್ನು ವೇಗಗೊಳಿಸುತ್ತದೆ. ಮತ್ತು ಇದರಿಂದ ಕೊಬ್ಬನ್ನು ಸುಡಲು ಸಹಾಯಕವಾಗುತ್ತದೆ.

- Advertisement -


ತೂಕ ಇಳಿಕೆಗೆ ಅತ್ಯಂತ ಹೆಸರುವಾಸಿಯಾದ ಪಾನೀಯವೆಂದರೆ ಅದು ನಿಂಬೆ ಹಣ್ಣಿನ ಪಾನಿಯ. ನಿಂಬೆಹಣ್ಣಿನ ಪಾನೀಯದ ಶಕ್ತಿಯ ವಿಷಯಕ್ಕೆ ಬಂದರೆ ಇದು ಹೊಟ್ಟೆಯ ಭಾಗದಲ್ಲಿರುವ ಫ್ಯಾಟ್ ಅನ್ನು ಕರಗಿಸಲು ಅತ್ಯಂತ ಸಹಾಯ ಮಾಡುವಂತಹ ಒಂದು ಪಾನೀಯವಾಗಿದೆ. ನಿಂಬೆರಸದಲ್ಲಿ ದೇಹವನ್ನು ಶುದ್ದಗೊಳಿಸುವ ಅಂಶವಿದ್ದು ಇದು ಚಯಾಪಚಯವನ್ನು ಉತ್ತೇಜಿಸುತ್ತಾ ಕೊಬ್ಬನ್ನು ಕರಗಿಸುತ್ತದೆ.
ನಿಂಬೆಯು ನಿಮಗೆ ಸ್ವಲ್ಪ ಹುಳಿ ಅನಿಸಿದಲ್ಲಿ, ನೀವು ಇದಕ್ಕೆ ಸ್ವಲ್ಪ ಪ್ರಮಾಣದ ಜೇನು ತುಪ್ಪವನ್ನು ರುಚಿಗೆ ಸೇರಿಸಬಹುದು. ಜೇನುತುಪ್ಪವೂ ಸಹ ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅರ್ಧ ಟೀ ಸ್ಪೂನ್ ಜೇನುತುಪ್ಪ ಮತ್ತು ಒಂದು ಟೀ ಸ್ಪೂನ್ ನಿಂಬೆ ರಸವನ್ನು ಒಂದು ಗ್ಲಾಸ್ ಬೆಚ್ಚಗಿನ ನೀರಿನಲ್ಲಿ ಸೇರಿಸಿ. ಈ ಪಾನೀಯವನ್ನು ಬೆಳಗ್ಗೆ ಎದ್ದಕೂಡಲೆ ಮತ್ತು ಮಲಗುವ ಮುನ್ನ ಕುಡಿಯಿರಿ.



Join Whatsapp