ಕೋಲ್ಕತ್ತಾ: ಮತ್ತೆ ಹೋರಾಟಕ್ಕಿಳಿದ ಕಿರಿಯ ವೈದ್ಯರು

Prasthutha|

ಕೋಲ್ಕತ್ತಾ: ತಮ್ಮ ಬೇಡಿಕೆಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಕಿರಿಯ ವೈದ್ಯರು, ಇಂದಿನಿಂದ ಪ್ರತಿಭಟನೆಯನ್ನು ಮತ್ತೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

- Advertisement -


ಕೋಲ್ಕತ್ತದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ರಾಜ್ಯಾದ್ಯಂತ ಕಿರಿಯ ವೈದ್ಯರು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ಆಶ್ವಾಸನೆ ಮೇರೆಗೆ 42 ದಿನಗಳ ಬಳಿಕ ಸೆಪ್ಟೆಂಬರ್ 20ರಂದು ಪ್ರತಿಭಟನೆ ಹಿಂಪಡೆದು ಅವರು ಕೆಲಸಕ್ಕೆ ಹಾಜರಾಗಿದ್ದರು.


‘ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಪಟ್ಟಂತೆ ನಮ್ಮ ಬೇಡಿಕೆಗಳಿಗೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಪ್ರತಿಭಟನೆ ಪ್ರಾರಂಭವಾಗಿ ಇಂದಿಗೆ 52 ದಿನ ಕಳೆದಿದೆ. ಆದರೂ ನಮ್ಮ ಮೇಲಿನ ದಾಳಿ ನಿಂತಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ನಡೆದ ಸಭೆಯಲ್ಲಿ ನೀಡಿದ ಭರವಸೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವೂ ನಡೆದಿಲ್ಲ. ಪ್ರತಿಭಟನೆ ಮುಂದುರಿಸುವುದು ಬಿಟ್ಟರೆ ನಮಗೆ ಬೇರೆ ಆಯ್ಕೆಯಿಲ್ಲ’ ಎಂದು ಕಿರಿಯ ವೈದ್ಯರಲ್ಲಿ ಒಬ್ಬರಾದ ಅನಿಕೇತ್ ಮಹಾತೊ ಪಿಟಿಐಗೆ ಹೇಳಿದ್ದಾರೆ.

- Advertisement -


‘ನಮ್ಮ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ’ ಎಂದರು.



Join Whatsapp