ಸೂರತ್: ಗುಜರಾತ್ನಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ವೆಂಟಿಲೇಟರ್ಗಳನ್ನು ಸೂರತ್ ಜಿಲ್ಲೆಯ ಆಸ್ಪತ್ರೆಗಳಿಗೆ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಸಾಗಿಸಿದ ಫೋಟೋ ವೈರಲಾಗಿದೆ.
ಗುಜರಾತ್ ನಲ್ಲಿ ನಿನ್ನೆ ಮೊದಲ ಬಾರಿಗೆ 3,000 ಕ್ಕೂ ಹೆಚ್ಚು ಕರೋನವೈರಸ್ ಪ್ರಕರಣಗಳನ್ನು ವರದಿ ಮಾಡಿದ್ದು, ರಾಜ್ಯದಲ್ಲಿ ವೆಂಟಿಲೇಟರ್ಗಳ ಕೊರತೆ ಕಾಣಿಸುತ್ತಿದೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಳ ಕೊರತೆಯನ್ನು ಗಮನಿಸಿದ ಗುಜರಾತ್ ಸರ್ಕಾರವು 34 ವೆಂಟಿಲೇಟರ್ಗಳನ್ನು ವಲ್ಸಾದ್ನಿಂದ ಸೂರತ್ಗೆ ಸಾಗಿಸಲು ಆದೇಶಿಸಿತ್ತು. ಆದೇಶವನ್ನು ಅನುಸರಿಸಿ, ಸೂರತ್ ಮಹಾನಗರ ಪಾಲಿಕೆ ವಲ್ಸಾದ್ನಿಂದ ವೆಂಟಿಲೇಟರ್ಗಳನ್ನು ಪಡೆಯಲು ಕಸದ ಟ್ರಕ್ ಕಳುಹಿಸಿದೆ. ಸೂರತ್ ಮುನ್ಸಿಪಲ್ ಕಾರ್ಪೋರೇಶನ್ ಕಳುಹಿಸಿದ ವಾಹನದಲ್ಲಿ ವೆಂಟಿಲೇಟರ್ಗಳನ್ನು ಸಾಗಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ ಎಂದು ವಲ್ಸಾದ್ ಕಲೆಕ್ಟರ್ ಆರ್.ಆರ್. ರಾವಲ್ ಹೇಳಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ 3,160 ಜನರಿಗೆ ಸೋಂಕು ಪತ್ತೆಯಾಗಿದ್ದರಿಂದ ಗುಜರಾತ್ನಲ್ಲಿ ದೈನಂದಿನ ಕೋವಿಡ್ -19 ಪ್ರಕರಣಗಳು ಮೊದಲ ಬಾರಿಗೆ 3000 ಸಂಖ್ಯೆ ದಾಟಿದೆ, ಇದು ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 3,21,598 ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.