‘QISF ಯಾವಾಗಲೂ ಸಮಾಜ ಸೇವೆ ಮತ್ತು ಉದಾತ್ತ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುತ್ತದೆ’ : ಸಯೀದ್ ಕೋಮಾಚಿ

Prasthutha|

ದೋಹ-ಕತಾರ್: QISF ಯಾವಾಗಲೂ ಸಮಾಜ ಸೇವೆ ಮತ್ತು ಉದಾತ್ತ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುತ್ತದೆ QISF ಕೇಂದ್ರ ಸಮೀತಿಯ ಅಧ್ಯಕ್ಷರಾದ ಸಯೀದ್ ಕೋಮಾಚಿ ಹೇಳಿದ್ದಾರೆ,

- Advertisement -

ಅವರು ಕತಾರ್ ಇಂಡಿಯನ್ ಸೋಷಿಯಲ್ ಫೋರಂ (QISF) ವತಿಯಿಂದ, ಹಮದ್ ಮೆಡಿಕಲ್ ಕಾರ್ಪೊರೇಷನ್ ನ ಸಹಯೋಗದೊಂದಿಗೆ, ಹಮದ್ ಆಸ್ಪತ್ರೆಯ ರಕ್ತದಾನ ಕೇಂದ್ರದಲ್ಲಿ, ಬೃಹತ್ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಮದ್ ಮೆಡಿಕಲ್ ಕಾರ್ಪೋರೇಷನ್ PHCC, ರಾವ್ದತ್ ಅಲ್ ಖೈರ್ ನ ಖ್ಯಾತ ವೈದ್ಯ ಅಮಿತ್ ವರ್ಮ ಶಿಬಿರದ ಉದ್ಘಾಟನೆಯನ್ನು ಮಾಡಿದರು. ಅವರು ತಮ್ಮ ಭಾಷಣದಲ್ಲಿ ರಕ್ತದಾನದ ಮಹತ್ವವನ್ನು ವಿವರಿಸಿ, ಒಬ್ಬ ವ್ಯಕ್ತಿಯು ರಕ್ತದಾನ ಮಾಡಿದರೆ, ಒಬ್ಬನ ರಕ್ತದಿಂದ 3 ಜೀವಗಳನ್ನು ಉಳಿಸಲು ಸಾಧ್ಯ. ಏಕೆಂದರೆ, ದಾನ ಮಾಡಿದ ರಕ್ತವನ್ನು, ಬೇರೆಯವರಿಗೆ ಕೊಡುವ ಮೊದಲು, ಅದನ್ನು 3 ಭಾಗಗಳಲ್ಲಿ ವಿಂಗಡಿಸಲಾಗುತ್ತದೆ ಎಂದು ಹೇಳಿ ರಕ್ತದಾನಿಗಳಿಗೆ ಸ್ಫೂರ್ತಿ ನೀಡಿದರು.

ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸ್ಸೋಸಿಯೇಶನ್ (SKMWA) ನ ಅಬ್ದುಲ್ ಮಜೀದ್ ರವರು QISF ನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದರು. ಇಂಡಿಯಾ ಫ್ರೆಟರ್ನಿಟಿ ಫೋರಂ ನ ಅಧ್ಯಕ್ಷರಾದ ಇರ್ಫಾನ್ ಕಾಪು ಮಾತನಾಡಿ, ಒಬ್ಬ ವ್ಯಕ್ತಿ ರಕ್ತದಾನ ಮಾಡಿ, ಯಾರಾದರೊಬ್ಬರ ಜೀವ ಉಳಿಸಿದರೆ, ಆತನು ಸಂಪೂರ್ಣ ಮಾನವಕುಲಕ್ಕೆ ರಕ್ತದಾನ ಮಾಡಿದಂತೆ ಎಂದು ಹೇಳಿ ಸಮಾಜ ಸೇವೆಗೆ ಪ್ರತಿಯೊಬ್ಬರೂ ಸ್ವಯಂ ಸೇವಕರಂತೆ ಮುಂದೆ ಬರಬೇಕೆಂದು ಕರೆ ನೀಡಿದರು.

- Advertisement -

ರಕ್ತದಾನ ಶಿಬಿರದಲ್ಲಿ ನೊಂದಾಯಿಸಿದ್ದ 138 ಮಂದಿಯಲ್ಲಿ, 114 ಮಂದಿ ಯಶಸ್ವಿಯಾಗಿ ರಕ್ತದಾನ ಮಾಡಿದರು. QISF ಕೇಂದ್ರ ಸಮೀತಿಯ ಮುಖ್ಯ ಕಾರ್ಯದರ್ಶಿ ಬಶೀರ್ ಅಹ್ಮದ್, QISF ರಾಜ್ಯ ಮತ್ತು ಶಾಖೆಗಳ ಪದಾಧಿಕಾರಿಗಳಾದ, ಝಕರೀಯ ಪಾಂಡೇಶ್ವರ, ಸಲೀಂ ಬಂಗಾಡಿ, ಅಶ್ರಫ್ ಪುತ್ತೂರು, ಇಬ್ರಾಹಿಂ U B, ಇರ್ಷಾದ್ ಕುಳಾಯಿ, ಅನ್ವರ್ ಅಂಗರಗುಂಡಿ, ರಿಜ್ವಾನ್ ಕಲ್ಲಡ್ಕ, ಆಸಿಫ್ ಬನ್ನೂರು, ಇಮ್ತಿಯಾಜ಼್ ಕಾರ್ನಾಡ್, ಜಮೀರ್ ಕಾರ್ನಾಡ್, ಅಬ್ದುಲ್ ಮೊಹಸಿನ್, ಮೊಹಮ್ಮದ್ ಫಹದ್, ಅನ್ವರ್ ಬೊಲ್ಯಾರ್, ಜಲೀಲ್ ಕಲ್ಲಡ್ಕ, ಖಾಲಿದ್ ಬೆಳಪು, ಗುಲಾಬ್ ಸಾಬ್, ಶಫೀಕ್ ಪುತ್ತೂರು, ಶಾಫಿ, ಸತ್ತಾರ್, ಇಮ್ರಾನ್ ಹೆಚ್ಕಲ್, ಜುನೈದ್ ಕುಂಜತ್ತೂರ್, ಆಶ್ರಫ್ ಹಳೆಯಂಗಡಿ, ಇಸ್ಮಾಯಿಲ್ ಕಾಪು ಹಾಗೂ ಮತ್ತಿತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
QISF ಕರ್ನಾಟಕ ರಾಜ್ಯಧ್ಯಕ್ಷರಾದ ನಜೀ಼ರ್ ಪಾಷ ರವರು ಅತಿಥಿಗಳನ್ನು ಮತ್ತು ರಕ್ತದಾನಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.



Join Whatsapp